ದಾನ ಮಾಡಿ ಕೈದಿಗಳ ರಿಲೀಸ್‌ ಮಾಡಿದ ಭಾರತೀಯ ಉದ್ಯಮಿ!

masthmagaa.com:

ಯುಎಇ ಮೂಲದ ಭಾರತೀಯ ಉದ್ಯಮಿ ಫಿರೋಜ್‌ ಮರ್ಚೆಂಟ್‌ ಅವ್ರು ಇದೀಗ ಸುಮಾರು 2.5 ಕೋಟಿ ರೂಪಾಯಿ ದಾನ ಮಾಡಿ ದುಬೈನ ಸೆಂಟ್ರಲ್‌ ಜೈಲಿನಲ್ಲಿರೋ ಕೈದಿಗಳನ್ನ ರಿಲೀಸ್‌ ಮಾಡಿಸಿದ್ದಾರೆ. ಫಿಲಾಂತ್ರಪಿಸ್ಟ್‌ ಅಂದ್ರೆ ಈ ರೀತಿ ದಾನ ಕೆಲಸಗಳಲ್ಲಿ ತೊಡಗಿಕೊಳ್ಳೋ ಇವ್ರು ರಮ್ಜಾನ್‌ ಪ್ರಯುಕ್ತ ಈ ಕೆಲಸ ಮಾಡಿದ್ದಾರೆ. ಯುಎಇ ಸರ್ಕಾರಕ್ಕೆ ಹಣ ದಾನ ಮಾಡಿ ಇದೀಗ 900 ಕೈದಿಗಳನ್ನ ಫ್ರೀ ಮಾಡಿದ್ದಾರೆ. ಕೈದಿಗಳು ಮಾಡ್ಕೊಂಡ ಸಾಲವನ್ನ ತೀರಿಸಿ… ತಮ್ಮ ತಾಯ್ನಾಡಿಗೆ ವಾಪಾಸ್‌ ಆಗಲು ಫ್ಲೈಟ್‌ ಟಿಕೆಟ್‌ನ್ನ ಕೂಡ ತಮ್ಮ ಸ್ವಂತ ಖರ್ಚಿನಿಂದಲೆ ಮಾಡಿಸಿದ್ದಾರೆ. ಅಂದ್ಹಾಗೆ ಯುಎಇ ಜೈಲಿನಲ್ಲಿರೋ ಕೆಲ ಕೈದಿಗಳ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ರೂ, ತಾವು ಮಾಡ್ಕೊಂಡಿರೋ ಸಾಲ ತೀರ್ಸೋಕಾಗ್ದೇ ಅಲ್ಲೇ ಜೈಲಿನಲ್ಲೇ ಇರ್ಬೇಕಾಗುತ್ತೆ. ಸೋ ಅಂತಹ ಅಸಹಾಯಕ ಕೈದಿಗಳಿಗೆ ಹಣ ಸಹಾಯ ಮಾಡಿ ಜೈಲಿಂದ ಫ್ರೀ ಮಾಡೋದೇ ಇವ್ರ ಮುಖ್ಯ ಉದ್ದೇಶ. ಇನ್ನು ಇವ್ರು ಈ ಹಿಂದೆ ಕೂಡ ಇದೇ ರೀತಿ ದಾನ ಮಾಡಿ ಒಟ್ಟು 20,000 ಕೈದಿಗಳನ್ನ ರಿಲೀಸ್‌ ಮಾಡಿಸಿದ್ರು.

-masthmagaa.com

Contact Us for Advertisement

Leave a Reply