ಮೆಹುಲ್ ಚೋಕ್ಸಿ ಭಾರತದ್ದೇ ಪ್ರಜೆ: ಡೊಮಿನಿಕಾ ಪ್ರಧಾನಿ

masthmagaa.com:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಸಿಬಿಐ ಮತ್ತು ಇಡಿಗೆ ಬೇಕಾಗಿರೋ
ಮೆಹುಲ್ ಚೋಕ್ಸಿ ಭಾರತದ ಪ್ರಜೆಯೇ.. ಅವರ ಗಡೀಪಾರಿನ ಬಗ್ಗೆ ಕೋರ್ಟ್​ ಡಿಸೈಡ್ ಮಾಡುತ್ತೆ ಅಂತ ಡೊಮಿನಿಕಾ ಪ್ರಧಾನಿ ರೂಸ್​​​ವೆಲ್ಟ್​ ಸ್ಕೆರಿಟ್​​ ಹೇಳಿದ್ದಾರೆ. ಜೊತೆಗೆ ಚೋಕ್ಸಿ ವಿಚಾರಣೆ ನಡೆಯೋದು ಬಾಕಿ ಇದ್ದು, ಈ ಹಂತದಲ್ಲಿ ಡೊಮಿನಿಕಾ ಕಾನೂನು ಪ್ರಕಾರ ಲಭ್ಯವಿರೋ ಎಲ್ಲಾ ಹಕ್ಕುಗಳನ್ನು ರಕ್ಷಣೆ ಮಾಡೋಕೆ ಸರ್ಕಾರ ಬದ್ಧವಾಗಿದೆ ಅಂತಲೂ ಹೇಳಿದ್ದಾರೆ. 62 ವರ್ಷದ ಮೆಹುಲ್ ಚೋಕ್ಸಿ ಭಾರತದಿಂದ ಓಡಿಹೋಗಿ, ಆಂಟಿಗುವಾದಲ್ಲಿ ನೆಲೆಸಿದ್ರು. ಮೇ 23ರಂದು ಅಲ್ಲಿಂದಲೂ ನಾಪತ್ತೆಯಾಗಿ ಈಗ ಡೊಮಿನಿಕಾದಲ್ಲಿ ತಗಲಾಕ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply