ರಹಸ್ಯ ದಾಖಲೆ ಸೋರಿಕೆ ಬಗ್ಗೆ ಸಿವಾಲ್‌ನಿಂದ ಸ್ಪೋಟಕ ವಿಚಾರ ಬಯಲು!

masthmagaa.com:

ರಷ್ಯಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪಾಕ್‌ ಪರ ಗೂಢಾಚಾರಿಕೆ ನಡೆಸಿದ್ದ ವ್ಯಕ್ತಿಯನ್ನ ಇತ್ತೀಚೆಗೆ ಬಂಧಿಸಲಾಗಿತ್ತು. ಇದೀಗ ಈ ಬಂಧಿತ ವ್ಯಕ್ತಿ ಸತ್ಯೆಂದರ್‌ ಸಿವಾಲ್‌ರನ್ನ ವಿಚಾರಣೆ ನಡೆಸಿರೋ UP ಉಗ್ರ ನಿಗ್ರಹ ಪಡೆ, ಈತ ಮಹಿಳೆಯೊಬ್ಬರ ಹೆಸರಿನ ಆನ್‌ಲೈನ್‌ ಖಾತೆಯಿಂದ ಹನಿ ಟ್ರಾಪ್‌ಗೆ ಒಳಗಾಗಿದ್ದಾನೆ ಅಂತ ಹೇಳಿದೆ. ಕಳೆದ ವರ್ಷ ಸೋಶಿಯಲ್‌ ಮೀಡಿಯಾದಲ್ಲಿ ಪೂಜಾ ಮೆಹ್ತಾ ಅನ್ನೊ ಹೆಸರಿನ ಖಾತೆಗೆ ಸಿವಾಲ್ ಪರಿಚಯವಾಗಿದ್ದ. ಬಳಿಕ ಈ ಅಕೌಂಟ್‌ನಿಂದ ಹಣದ ಆಮಿಷ ಒಡ್ಡಿ ಸಿವಾಲ್‌ನಿಂದ ರಹಸ್ಯ ಮಾಹಿತಿಯನ್ನ ಪಡೆದುಕೊಳ್ಳಲಾಗಿದೆ. ಸ್ವತಃ ಸಿವಾಲ್‌ ತಾನು ಪೂಜಾ ಅನ್ನೊ ಹೆಸರಿನ ಖಾತೆಗೆ ದೇಶದ ರಹಸ್ಯ ದಾಖಲೆ ಕಳಸಿದ್ದೇನೆ ಅಂತ ತಪ್ಪೊಪ್ಪಿಕೊಂಡಿದ್ದಾನೆ. ಅಲ್ದೇ ಆ ಎಲ್ಲ ದಾಖಲೆಗಳು ಇನ್ನು ನನ್ನ ಮೊಬೈಲ್‌ನಲ್ಲಿವೆ ಅಂತ ಸಿವಾಲ್‌ ಪೊಲೀಸರಿಗೆ ಹೇಳಿದ್ದಾನೆ. ಆದ್ರೆ ಇಂಟರೆಸ್ಟಿಂಗ್‌ ವಿಚಾರ ಅಂದ್ರೆ ಈ ಪೂಜಾ ಮೆಹ್ತಾ ಹೆಸರಿನ ಖಾತೆಯನ್ನ ಪಾಕಿಸ್ತಾನ ಇಂಟಲಿಜೆನ್ಸಿ ಏಜೆನ್ಸಿ ನಿರ್ವಹಣೆ ಮಾಡ್ತಿತ್ತು ಅಂತ UP ಉಗ್ರ ನಿಗ್ರಹ ಪಡೆ ತಿಳಿಸಿದೆ. ಹೀಗಾಗಿಯೇ ಆತನಿಂದ ರಹಸ್ಯ ದಾಖಲೆಗಳು ಪಾಕ್‌ಗೆ ಗೊತ್ತಾಗಿವೆ ಅಂತ ಈ ಸ್ಕ್ವಾಡ್‌ ಹೇಳಿದೆ. ಅಂದ್ಹಾಗೆ ಈ ಸಿವಾಲ್‌ 2021ರಿಂದ ರಷ್ಯಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲ್ಸ ಮಾಡ್ತಿದ್ದ. ಫೆಬ್ರುವರಿ 4 ರಂದು ಈತನನ್ನ ದೇಶದ ರಹಸ್ಯ ದಾಖಲೆಗಳ ಸೋರಿಕೆ ಆರೋಪದಡಿ ಬಂಧಿಸಲಾಗಿತ್ತು. ಆದ್ರೆ ಈಗ ವಿಚಾರಣೆ ವೇಳೆ ಸ್ಪೋಟಕ ವಿಚಾರಗಳು ಹೊರಬೀಳ್ತಿವೆ.

-masthmagaa.com

Contact Us for Advertisement

Leave a Reply