ಕೊರೋನಾ ತಡೆಗೆ ಭಾರತಕ್ಕೆ ಸಹಾಯ ಮಾಡುತ್ತಂತೆ ಪಾಕ್!

masthmagaa.com:

ಈ ನಡುವೆ ಕರಾಚಿ ಮೂಲದ ಮಾನವೀಯ ಮೌಲ್ಯಗಳನ್ನೊಳಗೊಂಡ ಸಂಸ್ಥೆ ಎದಿ ಫೌಂಡೇಷನ್​​​ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ಕೊರೋನಾ ಹಿನ್ನೆಲೆಯಲ್ಲಿ 50 ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸೋದಾಗಿ ಆಫರ್ ಕೊಟ್ಟಿದೆ. ನಮ್ಮ ಸೇವೆ ಬೇಕಾದ್ರೆ ಭಾರತದೊಳಗೆ ಪ್ರವೇಶಿಸಲು ಸ್ಥಳೀಯ ಆಡಳಿತ ಮತ್ತು ಪೊಲೀಸರ ಮೂಲಕ ಅನುಮತಿ ನೀಡುವಂತೆ ಕೇಳಿದೆ. ಯಾವುದೇ ಗಂಭೀರ ಸ್ಥಳದಲ್ಲಿ ಬೇಕಾದ್ರೂ ನಾವು ಸೇವೆ ಸಲ್ಲಿಸಲು ಸಿದ್ಧ ಅಂತ ಹೇಳಿದೆ. ಅದ್ರ ಬೆನ್ಲಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹರಿದಾಡೋಕೆ ಶುರುವಾಗಿದ್ದು, ಇಂಡಿಯಾ ನೀಡ್ಸ್ ಆಕ್ಸಿಜನ್, ಇಂಡಿಯಾ ಲಿವ್ಸ್ ಮ್ಯಾಟರ್ ಅನ್ನೋ ಹ್ಯಾಷ್ ಟ್ಯಾಗ್​​​ಗಳು ವೈರಲ್ ಆಗಿವೆ. ಹಲವರು ಭಾರತಕ್ಕಾಗಿ ಪ್ರಾರ್ಥಿಸಿದ್ದು, ಭಾರತಕ್ಕೆ ಕೈಲಾದ ಸಹಾಯ ಮಾಡಬೇಕು ಅಂತ ಹೇಳಿದ್ಧಾರೆ. ಆದ್ರೆ ಇದೇ ಇದಿ ಫೌಂಡೇಷನ್​​​ ಭಾರತೀಯ ಮೂಲದ ಮಾತು ಬಾರದ, ಅಂಗವಿಕಲ ಬಾಲಕಿ ಗೀತಾ ಎಂಬಾಕೆಯನ್ನು ಹಲವು ವರ್ಷಗಳ ಕಾಲ ಈ ಫೌಂಡೇಷನ್ ನೋಡಿಕೊಂಡಿತ್ತು. ಹೀಗಾಗಿ ಪ್ರಧಾನಿ ಮೋದಿ 2015ರಲ್ಲಿ ಈ ಸಂಸ್ಥೆಗೆ 1 ಕೋಟಿ ರೂಪಾಯಿ ದೇಣಿಗೆ ನೀಡೋದಾಗಿ ಘೋಷಿಸಿದ್ರು. ಆದ್ರೆ ಈ ಸಂಸ್ಥೆ ದೇಣಿಗೆ ಪಡೆಯೋಕೆ ನಿರಾಕರಿಸಿತ್ತು. ಮತ್ತೊಂದ್ಕಡೆ ಪಾಕಿಸ್ತಾನದಲ್ಲೂ ಕೂಡ ಕೊರೋನಾ ದಿನೇ ದಿನೇ ಜಾಸ್ತಿಯಾಗ್ತಿದ್ದು, ಮಾಸ್ಕ್ ಧರಿಸಿ, ರೂಲ್ಸ್ ಫಾಲೋ ಮಾಡಿ.. ಇಲ್ಲವಾದ್ರೆ ಮತ್ತೊಮ್ಮೆ ಲಾಕ್​ಡೌನ್ ಮಾಡೋದಾಗಿ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ಧಾರೆ.

-masthmagaa.com

Contact Us for Advertisement

Leave a Reply