ಅಮೆರಿಕದಲ್ಲಿ ಭಾರತೀಯ ಮೂಲದ ಗರ್ಭಿಣಿ ಮರ್ಡರ್, ಪತಿ ಆತ್ಮಹತ್ಯೆ..!

masthmagaa.com:

ಅಮೆರಿಕ: ಭಾರತೀಯ ಮೂಲದ ಗರ್ಭಿಣಿಯೊಬ್ಬರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಅಮೆರಿಕದ ಹಡ್ಸನ್​ನಲ್ಲಿ ನಡೆದಿದೆ. ಅವರ ಪತಿಯ ಮೃತದೇಹ ಹಡ್ಸನ್ ನದಿಯಲ್ಲಿ ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಗರಿಮಾ ಕೊಥಾರಿ ಹಾಗೂ ಮೋಹನ್ ಅಂತ ಗುರುತಿಸಲಾಗಿದೆ.

ಗರಿಮಾ ಕೊಥಾರಿ ಅವರ ಮೃತದೇಹದಲ್ಲಿ ಸಾಕಷ್ಟು ಗಾಯಗಳು ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಅಂತ ದೃಢಪಟ್ಟಿದೆ. ಅಲ್ಲದೆ ಅವರು 5 ತಿಂಗಳ ಗರ್ಭಿಣಿಯಾಗದ್ದರು ಅಂತ ವೈದ್ಯರು ಹೇಳಿದ್ದಾರೆ. ಪೊಲೀಸರು ಇದೊಂದು ಮರ್ಡರ್-ಸೂಸೈಡ್ ಪ್ರಕರಣ ಅಂತ ಶಂಕಿಸಿದ್ದಾರೆ. ಪತ್ನಿಯನ್ನು ಕೊಲೈಗೈದ ಪತಿ ಮೋಹನ್ ಬಳಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದ್ರೆ ತನಿಖೆಯ ಬಳಿಕವೇ ಸತ್ಯಾಸತ್ಯತೆ ಹೊರಬೀಳಲಿದೆ.

-masthmagaa.com

Contact Us for Advertisement

Leave a Reply