masthmagaa.com:

ಕೊರೋನಾ ಹೊಡೆತದಿಂದ ಕಳೆದ ಆರ್ಥಿಕ ವರ್ಷದ ಮೊದಲೆರಡು ತ್ರೈ ಮಾಸಿಕದಲ್ಲಿ ಮೈನಸ್​ ಇದ್ದ ಭಾರತದ ಆರ್ಥಿಕತೆ ಬೆಳವಣಿಗೆ ದರ 3ನೇ ತ್ರೈ ಮಾಸಿಕದಲ್ಲಿ ಪ್ಲಸ್​ಗೆ ಬಂದಿದೆ. ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ಭಾರತದ ಜಿಡಿಪಿ 0.4 ಪರ್ಸೆಂಟ್​ ಗ್ರೋಥ್ ಆಗಿದೆ ಅಂತ ನ್ಯಾಷನಲ್​ ಸ್ಟಾಟಿಸ್ಟಿಕಲ್ ಆಫೀಸ್ (NSO) ಬಿಡುಗಡೆ ಮಾಡಿದ ಡೇಟಾ ತಿಳಿಸಿದೆ. ಮೊದಲ ತ್ರೈ ಮಾಸಿಕದಲ್ಲಿ ಮೈನಸ್​ 24.40 ಪರ್ಸೆಂಟ್ ಕುಸಿದಿತ್ತು. ಎರಡನೇ ತ್ರೈ ಮಾಸಿಕದಲ್ಲಿ ಮೈನಸ್​ 7.30 ಪರ್ಸೆಂಟ್ ಕುಸಿದಿತ್ತು. ಆದ್ರೀಗ ಮೂರನೇ ಕ್ವಾರ್ಟರ್​ನಲ್ಲಿ ಪ್ಲಸ್ 0.4 ಪರ್ಸೆಂಟ್ ಗ್ರೋಥ್ ಆಗಿದೆ. ಈ ಮೂಲಕ ಟೆಕ್ನಿಕಲ್ ರಿಸೆಷನ್​ಗೆ ಜಾರಿದ್ದ ಭಾರತ ಅದರಿಂದ ಹೊರಬಂದಿದೆ. ಇದು ತ್ರೈ ಮಾಸಿಕಕ್ಕೆ ಸಂಬಂಧಿಸಿದ ಅಂಕಿ ಅಂಶ.. ಇನ್ನು ಇಡೀ ಆರ್ಥಿಕ ವರ್ಷದ ಲೆಕ್ಕ ನೋಡಿದ್ರೆ, ಈ ವರ್ಷ ಜಿಡಿಪಿ ದರ ಮೈನಸ್ 8 ಪರ್ಸೆಂಟ್​ ಕುಸಿಯಲಿದೆ ಅಂತ ಎನ್​ಎಸ್​ಒ ಅಂತ ಅಂದಾಜು ಮಾಡಿದೆ. ಮೊದಲು 7.7 ಅಂತ ಅಂದಾಜು ಮಾಡಲಾಗಿತ್ತು. ಆದ್ರೆ ಈಗ ಅಂದುಕೊಂಡಷ್ಟು ವೇಗವಾಗಿ ಚೇತರಿಕೆ ಕಾಣ್ತಿಲ್ಲ ಅಂತಾ ಇದರಿಂದ ಗೊತ್ತಾಗ್ತಿದೆ.

-masthmagaa.com

Contact Us for Advertisement

Leave a Reply