ರಷ್ಯಾ-ಭಾರತ ಡೀಲ್​! ಅಮೆರಿಕ ಕಂಗಾಲ್! ಯಾಕೆ ಗೊತ್ತಾ?

masthmagaa.com:

ರಷ್ಯಾ-ಭಾರತದ ನಡುವಿನ ಸಂಬಂಧ ಎಸ್​​-400 ಮಿಸೈಲ್ ಡಿಫೆನ್ಸ್ ಸಿಸ್ಟಂ ಖರೀದಿ ಒಪ್ಪಂದಕ್ಕೆ ಅಮೆರಿಕ ಅಡ್ಡಗಾಲು ಹಾಕೋದನ್ನು ಮುಂದುವರಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿ ನಡೆಸ್ತಿದ್ರು. ಈ ವೇಳೆ ಭಾರತ ಮತ್ತು ರಷ್ಯಾದ ಎಸ್​​400 ಡೀಲ್,​​​​​ ಅಮೆರಿಕ ಮತ್ತು ಭಾರತದ ಸಂಬಂಧದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅಂತ ಪ್ರಶ್ನೆ ಕೇಳಲಾಯ್ತು.. ಆಗ ಉತ್ತರಿಸಿದ ನೆಡ್​ಪ್ರೈಸ್​, ರಷ್ಯಾ ಭಾರತಕ್ಕೆ ಈ ವೆಪನ್ ಸಿಸ್ಟಂ ಮಾರೋ ಮೂಲಕ ಏಷ್ಯಾದಲ್ಲಿ ಮತ್ತು ಆ ಮೂಲಕ ಇಡೀ ವಿಶ್ವದಲ್ಲಿ ಅಸ್ಥಿರತೆಯನ್ನು ಸೃಷ್ಟಿಸೋ ಪ್ರಯತ್ನ ನಡೆಸ್ತಿದೆ ಅಂತ ಹೇಳಿದ್ದಾರೆ. ಜೊತೆಗೆ ಭಾರತ ಮತ್ತು ರಷ್ಯಾದ ಎಸ್​​-400 ಡೀಲ್​ ಬಗ್ಗೆ ನಮಗೆ ಚಿಂತೆ ಇದೆ. ಇದ್ರಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.. ಭಾರತವಾಗಲೀ.. ಅಥವಾ ಬೇರೆ ದೇಶವಾಗಲೀ.. ರಷ್ಯಾದ ಜೊತೆಗೆ ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿಂತೆ ಯಾವುದೇ ಹೊಸ ಡೀಲ್ ಮಾಡ್ಕೊಳ್ಬೇಡಿ ಅಂತ ಎಲ್ಲಾ ದೇಶಗಳಿಗೆ ಆಗ್ರಹಿಸ್ತಿದ್ದೀವಿ ಅಂತ ಹೇಳಿದ್ದಾರೆ. ಅಂದಹಾಗೆ ಭಾರತ ರಷ್ಯಾದಿಂದ ಈ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸಲು ಅಮೆರಿಕ ಮೊದಲಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಆದ್ರೂ ಕೂಡ ಭಾರತ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಅಂದಹಾಗೆ 25 ಸಾವಿರ ಕೋಟಿ ರೂಪಾಯಿ ಮೊತ್ತದ ಒಪ್ಪಂದ ಇದಾಗಿದೆ.

-masthmagaa.com

Contact Us for Advertisement

Leave a Reply