2 ನಿಮಷಗಳ ಇಂಧನ ಉಳಿಸಿಕೊಂಡು ಲ್ಯಾಂಡ್‌ ಆದ ಅಯೋಧ್ಯೆ ವಿಮಾನ!

masthmagaa.com:

ಶನಿವಾರ ಅಯೋಧ್ಯೆಯಿಂದ ದೆಹಲಿಗೆ ಪ್ರಯಾಣ ಬೆಳೆಸ್ತಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಜೀವ ಬಾಯಿಗೆ ಬರುವಂತ ಘಟನೆ ನಡೆದಿದೆ. ಶನಿವಾರ ಸಂಜೆ ದೆಹಲಿಯಲ್ಲಿ ಈ ವಿಮಾನ ಲ್ಯಾಂಡ್‌ ಆಗ್ಬೇಕಿತ್ತು. ಆದ್ರೆ ಪ್ರತಿಕೂಲ ಹವಮಾನದಿಂದಾಗಿ ಎರಡು ಬಾರಿ ವಿಮಾನ ಲ್ಯಾಂಡ್‌ ಮಾಡೋಕೆ ಪ್ರಯತ್ನ ಪಟ್ರೂ ಸಾಧ್ಯ ಆಗಿಲ್ಲ. ಈ ವೇಳೆ ಸುರಕ್ಷತಾ ಕ್ರಮವಾಗಿ ಇನ್ನು 45 ನಿಮಿಷಕ್ಕೆ ಆಗುವಷ್ಟು ಇಂಧನ ಮಾತ್ರ ಇದೆ ಅಂತ ವಿಮಾನದಲ್ಲಿ ಅನೌನ್ಸ್‌ ಮಾಡಲಾಗಿತ್ತು. ಆದ್ರೆ 45 ಕಳೆದು.. 75 ನಿಮಿಷ ಆದ್ಮೇಲೂ ವಿಮಾನ ಆಕಾಶದಲ್ಲೇ ಇತ್ತು. ಅದಾದ ಮೇಲೆ ವಿಮಾನವನ್ನ ಚಂಢೀಗಡಕ್ಕೆ ಡೈವರ್ಟ್‌ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ಗಾಬರಿಯಿಂದ ದಿಗ್ಬ್ರಮೆಯಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಖುದ್ದು ವಿಮಾನ ಸಿಬ್ಬಂದಿ ಪ್ಯಾನಿಕ್‌ ಆಗಿ ವಾಮಿಟ್‌ ಮಾಡ್ಕೊಂಡಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಕೊನೆಗೆ 115 ನಿಮಿಷ ಕಳೆದ್ಮೇಲೆ ಚಂಢೀಗಡದಲ್ಲಿ ವಿಮಾನ ಲ್ಯಾಂಡ್‌ ಆಗಿದೆ. ಆತಂಕಕಾರಿ ವಿಚಾರ ಅಂದರೆ ಲ್ಯಾಂಡ್‌ ಆದಾಗ ವಿಮಾನದಲ್ಲಿ ಕೇವಲ ಒಂದೆರಡು ನಿಮಿಷಕ್ಕೆ ಸಾಕಾಗುವಷ್ಟು ಇಂಧನವಷ್ಟೇ ಉಳಿದಿತ್ತು ಅಂತ ತಿಳಿದು ಬಂದಿದೆ. ಈ ವಿಚಾರವಾಗಿ ಜನ ಆಕ್ರೋಶ ವ್ಯಕ್ತಪಡಿಸಿ, ನಾಗರೀಕ ವಿಮಾನಯಾನ ಮಹಾನಿರ್ದೇಶಕರು ಹಾಗೂ ಸಚಿವಾಲಯ ಈ ಬಗ್ಗೆ ತನಿಖೆ ನಡೆಸ್ಬೇಕು ಅಂತ ಆಗ್ರಹಿಸಿದ್ದಾರೆ. ಅಂದ್ಹಾಗೆ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ರು ಅಂತ ತಿಳಿದುಬಂದಿಲ್ಲ. ಆದ್ರೆ ಇದು ಏರ್‌ಬಸ್‌ನ A320neo ವಿಮಾನ. ಸೋ ಇದ್ರಲ್ಲಿ ಸುಮಾರು 186 ಸೀಟ್‌ಗಳಿರುತ್ವೆ. ಸೋ ಜನ ಜಾಸ್ತಿನೇ ಇರೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply