ಇಂಡಿಗೂ ವಿಮಾನದೊಳಗೆ ರಾಮನ ಭಜನೆ! ಜನರಿಂದ ಭಾರೀ ಟೀಕೆ!

masthmagaa.com:

ಇಂಡಿಗೋ ವಿಮಾನದೊಳಗೆ ಕೆಲ ಪ್ಯಾಸೆಂಜರ್‌ಗಳು ರಾಮ ಭಜನೆ ಹಾಡಿ, ಧೋಲಕ್‌ ವಾದ್ಯ ಭಾರಿಸಿರೋ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ರಘುಪತಿ ರಾಘವ ರಾಜರಾಮ್‌ ಅಂತ ಹಾಡಿ, ವಿಮಾನದೊಳಗೆ ಒಂದ್‌ ರೀತಿ ಧಾರ್ಮಿಕ ಕಾರ್ಯಕ್ರಮದ ವಾತಾವರಣ ಸೃಷ್ಟಿಸಿದ್ದಾರೆ. ಆದ್ರೆ ಇದಕ್ಕೆ ವಿಮಾನದಲ್ಲಿದ್ದ ಪ್ಯಾಸೆಂಜರ್‌ಗಳಿಂದಾಗ್ಲಿ ಅಥ್ವಾ ಸಿಬ್ಬಂದಿಯಿಂದಾಗ್ಲಿ ಯಾವ್ದೇ ರೀತಿ ವಿರೋಧ ವ್ಯಕ್ತವಾಗಿಲ್ಲ. ಬದಲಿಗೆ ಎಲ್ಲರೂ ತಮ್ಮ ಮೊಬೈಲ್‌ ಹಿಡಿದು ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಅದೇ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಆಗಿದ್ದೇ ತಡ, ಜನರಿಂದ ಟೀಕೆಗಳು ವ್ಯಕ್ತವಾದ್ವು.

-masthmagaa.com

Contact Us for Advertisement

Leave a Reply