ಹಿಂದು ಧ್ವಜ ಹಾರಿಸಿ ಕೆನಡಾ ಪಾರ್ಲಿಮೆಂಟ್‌ನಲ್ಲಿ ದೀಪಾವಳಿ ಆಚರಣೆ!

masthmagaa.com:

ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವಲ್ಲಿ ಇದೀಗ ಇಂಡೋ-ಕೆನಡಾ ಸಂಸದ, ಕೆನಡಾದ ಪಾರ್ಲಿಮೆಂಟ್‌ ಹಾಲ್‌ನಲ್ಲೇ ದೀಪಾವಳಿ ಹಬ್ಬವನ್ನ ಆಚರಿಸಿದ್ದಾರೆ. ಸಂಸದ ಚಂದ್ರಶೇಖರ್‌ ಆರ್ಯ ಅವ್ರು ಕೆನಡಾದ ಸಂಸತ್ತಿನಲ್ಲಿ ʻಓಂʼ ಚಿಹ್ನೆ ಇರೋ ಹಿಂದು ಧ್ವಜವನ್ನ ಹಾರಿಸಿ, ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನ ಆಯೋಜಿಸಿದ್ದಾರೆ. ಈ ಕುರಿತು `X’ನಲ್ಲಿ ಪೋಸ್ಟ್‌ ಮಾಡಿರೋ ಚಂದ್ರಶೇಖರ್‌, ನವೆಂಬರ್‌ 5 ರಂದು ಆಯೋಜಿಸಿದ್ದ ದೀಪಾವಳಿ ಆಚರಣೆಯ ಕಾರ್ಯಕ್ರಮದಲ್ಲಿ ಕೆನಡಾದಲ್ಲಿ ವಾಸಿಸೋ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಕೆನಡಾ ಪಾರ್ಲಿಮೆಂಟ್‌ ಹಾಲ್‌ನಲ್ಲಿ ದೀಪಾವಳಿ ಕಾರ್ಯಕ್ರಮವನ್ನ ಹೋಸ್ಟ್‌ ಮಾಡಿರೋದಕ್ಕೆ ನನಗೆ ತುಂಬ ಖುಷಿಯಾಗಿದೆ. ಈ ಸಂದರ್ಭದಲ್ಲಿ ಪವಿತ್ರವಾದ ʻಓಂʼ ಚಿಹ್ನೆಯ ಹಿಂದು ಫ್ಲ್ಯಾಗ್‌ನ್ನ ಕೆನಡಾ ಸಂಸತ್ತಿನಲ್ಲಿ ಹಾರಿಸಿದ್ವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಸಂಸದ ಚಂದ್ರಶೇಖರ್‌ ಆರ್ಯ ಮೂಲತಃ ನಮ್ಮ ಕರ್ನಾಟಕದವ್ರು.

-masthmagaa.com

Contact Us for Advertisement

Leave a Reply