masthmagaa.com:

ಮುಸ್ಲಿಂ ಮೆಜಾರಿಟಿ ದೇಶಗಳ ಪೈಕಿ ಪ್ರಮುಖ ದೇಶವಾಗಿರೋ ಇಂಡೋನೇಷ್ಯಾದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಆ ದೇಶದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಇಸ್ಲಾಮಿಕ್ ಡಿಫೆಂಡರ್ಸ್ ಫ್ರಂಟ್​ ಅನ್ನು ಬ್ಯಾನ್ ಮಾಡಲಾಗಿದೆ. ಇಂಡೋನೇಷ್ಯಾದ ಮುಖ್ಯ ಭದ್ರತಾ ಸಚಿವ ಮಹ್ಫೂದ್ ಎಮ್​ಡಿ ಇದನ್ನ ಅನೌನ್ಸ್ ಮಾಡಿದ್ದಾರೆ. ಇನ್ಮುಂದೆ ಈ ಸಂಘಟನೆ ಕಾನೂನು ಬಾಹಿರ. ಇಂಡೋನೇಷ್ಯಾ ಜಗತ್ತಿನ ಇತರ ಮುಸ್ಲಿಂ ದೇಶಗಳಿಗೂ ಮಾದರಿ. ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಮುಸ್ಲಿಮರು ವಾಸವಾಗಿರೋ ದೇಶ ಇಂಡೋನೇಷ್ಯಾ. ಇಲ್ಲಿನ 26 ಕೋಟಿ ಜನಸಂಖ್ಯೆಯಲ್ಲಿ 23 ಕೋಟಿ ಮುಸ್ಲಿಮರಿದ್ದಾರೆ. ಪಾಕಿಸ್ತಾನಕ್ಕಿಂತ ಜಾಸ್ತಿ. ಆದ್ರೆ ಮೂಲಭೂತವಾದಕ್ಕಿಂತ ಹೆಚ್ಚು ಸಮಾನತೆ, ಬ್ಯುಸಿನೆಸ್, ಎಕಾನಮಿ ಕಡೆ ಜಾಸ್ತಿ ಗಮನ ಕೊಟ್ಟ ಕಾರಣ ಆರ್ಥಿಕವಾಗಿ ಈ ದೇಶ ಪ್ರಗತಿ ಸಾಧಿಸಿದೆ. ಆರ್ಥಿಕವಾಗಿ ಪಾಕಿಸ್ತಾನ ಇಂಡೋನೇಷ್ಯಾಗೆ ಕಂಪೇರ್​​ ಕೂಡ ಮಾಡೋಕ್ಕಾಗಲ್ಲ. ಪಾಕಿಸ್ತಾನ ಜಿಡಿಪಿಯಲ್ಲಿ 42ನೇ ಸ್ಥಾನದಲ್ಲಿದ್ರೆ, ಇಂಡೋನೇಷ್ಯಾ 15ನೇ ಸ್ಥಾನದಲ್ಲಿದೆ. ಇದರಲ್ಲಿ ಪಾಠ ಎಲ್ಲರಿಗೂ ಇದೆ. ಧರ್ಮದ ಅಮಲು, ಉನ್ಮಾದ ಏರಿಸಿಕೊಂಡು ಅಶಾಂತಿ ಮಾಡೋರಿಗೂ ಇದೆ. ಸೇಮ್ ಟೈಮ್ ಧರ್ಮದ ರಾಜಕಾರಣ ಮಾಡೋರಿಗೂ ಪಾಠ ಇದೆ. ಸಭ್ಯ ಸಮಾಜಕ್ಕೆ ಎರಡೂ ಒಳ್ಳೇದಲ್ಲ.

-masthmagaa.com

Contact Us for Advertisement

Leave a Reply