ಮೂರನೇ ತ್ರೈಮಾಸಿಕದಲ್ಲಿ ಇಂಫೋಸಿಸ್‌ಗೆ ಕೊಂಚ ಹಿನ್ನಡೆ!

masthmagaa.com:

ಐಟಿ ದಿಗ್ಗಜ ಇಂಫೋಸಿಸ್‌ 3ನೇ ತ್ರೈಮಾಸಿಕದಲ್ಲಿ ಕೊಂಚ ಹಿನ್ನಡೆ ಕಂಡಿದೆ. Y-O-Y ಬೇಸಿಸ್‌ನಲ್ಲಿ ಇಂಫೋಸಿಸ್‌ನ ಮೂರನೇ ತ್ರೈಮಾಸಿಕದ ನೆಟ್‌ ಫ್ರಾಫಿಟ್‌ 7.3% ಕುಸಿದಿದೆ. ಕೇವಲ ₹6,106 ಕೋಟಿ ಲಾಭ ಪಡೆಯೋಕೆ ಸಫಲ ಆಗಿದೆ. ಇನ್ನು ಸೀಕ್ವೆನ್‌ಷಿಯಲ್‌ ಬೇಸಿಸ್‌ ಅಂದ್ರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದ್ರು ಕೂಡ ನೆಟ್‌‌ ಪ್ರಾಫಿಟ್‌ 1.7% ಕಡಿಮೆಯಾಗಿದೆ. ಸಾಮಾನ್ಯವಾಗಿ ನವೆಂಬರ್‌ ಡಿಸೆಂಬರ್‌ನಲ್ಲಿ ಭಾರತದ IT ಮಾರ್ಕೆಟ್‌ಗಳಾದ ಅಮೆರಿಕ-ಯುರೋಪ್‌ನಲ್ಲಿ ರಜೆ ಇರುತ್ತೆ. ಹೀಗಾಗಿ ಮೂರನೇ ತ್ರೈಮಾಸಿಕದಲ್ಲಿ IT ಕಂಪನಿಗಳ ಪರ್ಫಾರ್ಮೆನ್ಸ್‌ ಸ್ವಲ್ಪ ಡೌನ್‌ ಆಗಿರುತ್ತೆ. ನೆಟ್‌ ಪ್ರಾಫಿಟ್‌ ಕುಸಿದ ಬೆನ್ನಲ್ಲೇ ಅತ್ತ ಇಂಫೋಸಿಸ್‌ ತನ್ನ ವಾರ್ಷಿಕ ಆದಾಯದ ನಿರೀಕ್ಷೆಯನ್ನ ಕೂಡ ಕಡಿಮೆ ಮಾಡ್ಕೊಂಡಿದೆ. ರೆವಿನ್ಯೂ ಗ್ರೌತ್‌ ಗೈಡನ್ಸ್‌ನ 1-2.5% ಇದ್ದಿದ್ನ 1.5-2%ಗೆ ತಂದಿದೆ. ಇನ್ನು ಮೂರನೇ ತ್ರೈಮಾಸಿಕದಲ್ಲಿ ಇಂಫೋಸಿಸ್‌ನ ಕನ್ಸಾಲಿಡೇಟೆಡ್‌ ರೆವಿನ್ಯೂ ಅಂದ್ರೆ ಒಟ್ಟಾರೆ ಆದಾಯ 38,821 ಕೋಟಿ ಆಗಿದೆ. 1.3% ಏರಿಕೆಯಾಗಿದೆ. ಇನ್ನು ಇದೇ ವೇಳೆ ಇಂಫೋಸಿಸ್‌ ಟಾಪ್‌ ಸೆಮಿಕಂಡಕ್ಟರ್‌ ಡಿಸೈನ್‌ ಕಂಪನಿಯಾದ InSemiನ 280 ಕೋಟಿಗೆ ಸ್ವಾಧಿನ ಪಡಿಸ್ಕೊಂಡಿದೆ.

-masthmagaa.com

Contact Us for Advertisement

Leave a Reply