ಮುಂಬೈನಲ್ಲಿ ಹೊಸ ಸಬ್ ಮರೀನ್ ಲಾಂಚ್! ನೌಕಾಪಡೆಗೆ ಮತ್ತಷ್ಟು ಬಲ.!

masthmagaa.com:

ಐಎನ್‌ಎಸ್‌ ವಗ್ಶೀರ್ ಅನ್ನೋ ‘ದಾಳಿ ಸಬ್‌ ಮರೀನ್’‌ಅನ್ನ ಮುಂಬೈನ ನೌಕಾನೆಲೆಯಲ್ಲಿ ಲಾಂಚ್‌ ಮಾಡಲಾಗಿದೆ. ಭಾರತ ನೌಕಾಪಡೆಗೆ ಈಗ ಮತ್ತಷ್ಟು ಬಲ ಸಿಕ್ಕಿದೆ.‌ ಮಜಗಾನ್‌ ಡಾಕ್‌ ಶಿಪ್‌ ಬಿಲ್ಡರ್‌ ಅನ್ನೋ ಸರ್ಕಾರೀ ಒಡೆತನದ ಕಂಪನಿ ಇದನ್ನ ನಿರ್ಮಾಣಮಾಡಿದೆ. ಭಾರತ ಕೈಗೊಂಡಿದ್ದ ಮಿಷನ್‌ -75 ಅನ್ನೋ 6 ಸ್ಕೋರ್ಪಿನ್‌ ಕ್ಲಾಸ್‌ ಮಾದರಿಯ ಸಬ್‌ ಮರೀನ್ ನಿರ್ಮಾಣದ ಯೋಜನೆಯ ಪೈಕಿ ಇದು ಕೊನೆಯ ಸಬ್‌ ಮರೀನ್‌. ಕೇಂದ್ರ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ್‌ ಕುಮಾರ್‌ ಇದನ್ನ ಲಾಂಚ್‌ ಮಾಡಿದ್ದಾರೆ. ಅಂದ್ಹಾಗೆ ವಗ್ಶೀರ್‌ ಅನ್ನೋ ಹೆಸರಿನ ಸಬ್ ಮರೀನ್‌ ಈ ಹಿಂದೆಯೂ ಭಾರತ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿತ್ತು. ಅದು 1974ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿ 1977ರಲ್ಲಿ ನಿವೃತ್ತಿ ಹೊಂದಿತ್ತು.

-masthmagaa.com

Contact Us for Advertisement

Leave a Reply