ದೃಶ್ಯಂ ಸಿನಿಮಾ ಸೀನ್ ರಿಮೇಕ್‌ ಮಾಡಕೆ ಹೋಗಿ ತಗ್ಲಾಕ್ಕೊಂಡ ಭೂಪ

masthmagaa.com:

ದೆಹಲಿಯಲ್ಲಿ ದೃಶ್ಯ ಸಿನಿಮಾ ರೀತಿ ರಿಯಲ್ ಲೈಫಲ್ಲಿ ಸೀನ್ ಕ್ರಿಯೇಟ್ ಮಾಡಕ್ಕೆ ಹೋಗಿ ಒಬ್ಬ ಸರಿಯಾಗೇ ತಗಲಾಕ್ಕೊಂಡಿದ್ದಾರೆ. ಅಮರ್​ಪಾಲ್ ಎಂಬಾತ ಪಕ್ಕದ ಮನೆಯ ಓಂ ಬೀರ್ ಅನ್ನೋರ ತಾಯಿಯನ್ನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೊಲೆ ಮಾಡಿದ್ದ. ಇದೇ ಕಾರಣಕ್ಕೆ ಜೈಲಿಗೂ ಹೋಗಿ, ಜಾಮೀನು ಮೇಲೆ ಹೊರಗೆ ಬಂದಿದ್ದ. ಈ ವೇಳೆ ಓಂ ಬೀರ್ ಹತ್ರ ಹೋಗಿ ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹೇರೋಕೆ ಯತ್ನಿಸಿದ. ಆದ್ರೆ ಆತ ಜಗ್ಗದೇ ಇದ್ದಾಗ ತನ್ನ ಮೂವರು ಬೆಂಬಲಿಗರಿಗೆ ಹಿಂದಿಯ ದೃಶ್ಯಂ ಸಿನಿಮಾ ತೋರಿಸಿದ ಅಮರ್​​ಪಾಲ್​​, ಓಂ ಬೀರ್​​ನನ್ನು ಕೊಲೆಯತ್ನ ಕೇಸಲ್ಲಿ ಸಿಲುಕಿಸಲು ಪ್ಲಾನ್ ಮಾಡಿದ್ದಾನೆ. ಆರಂಭದಲ್ಲಿ ಅಮರ್​ಪಾಲ್​​​​​​​, ಓಂ ಬೀರ್​​​​​ನಿಂದ ನನಗೆ ಬೆದರಿಕೆ ಇದೆ ಅಂತ ಹೇಳಿಕೊಂಡು ಓಡಾಡಿದ್ದ. ನಂತರ ಹೇಗೋ ನಾಡ ಪಿಸ್ತೂಲು ಮತ್ತು ಬುಲೆಟ್ ಅರೆಂಜ್ ಮಾಡಿ ತನ್ನ ಮೇಲೆ ತನ್ನ ಬೆಂಬಲಿಗರಿಂದಲೇ ಗುಂಡು ಹಾರಿಸಿಕೊಂಡಿದ್ದಾನೆ. ನಂತರ ಗಾಯಗೊಂಡ ಅಮರ್​ಪಾಲ್​ ಇದು ಓಂ ಬೀರ್ ಕೆಲಸ ಅಂತ ಆರೋಪಿಸಿದ್ದಾನೆ. ಆದ್ರೆ ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಿದ್ದಿದ್ದು, ಈಗ ಮತ್ತೆ ಕಂಬಿ ಹಿಂದೆ ಲಾಕ್ ಆಗಿದ್ದಾನೆ.

-masthmagaa.com

Contact Us for Advertisement

Leave a Reply