ಜಮ್ಮು ಕಾಶ್ಮೀರದಲ್ಲಿ ಎನ್​​ಐಎ ದಾಳಿ: 700 ಮಂದಿ ವಶಕ್ಕೆ!

masthmagaa.com:

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿಗಳು ಹೆಚ್ಚಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಉಗ್ರರ ಬಗ್ಗೆ ಅನುಕಂಪ ಹೊಂದಿರೋ 700 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಇವರ ಪೈಕಿ 500 ಮಂದಿ ನಿಷೇಧಿತ ಉಗ್ರ ಅಥವಾ ಧಾರ್ಮಿಕ ಸಂಘಟನೆಗಳ ಲಿಂಕ್ ಹೊಂದಿರೋ ಆರೋಪ ಹೊಂದಿದ್ದಾರೆ ಅಂತ ಕೂಡ ಪೊಲೀಸರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್​​​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಸ್​ಐಎಸ್​​ನ ಮ್ಯಾಗ್ಜೀನ್​ ವಾಯ್ಸ್ ಆಫ್ ಹಿಂದ್ ಮತ್ತು ಬಟಿಂಡಿಯಲ್ಲಿ ಇತ್ತೀಚೆಗೆ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಶ್ರೀನಗರ, ಬಾರಾಮುಲ್ಲಾ ಮತ್ತು ಅನಂತ್​ನಾಗ್ ಜಿಲ್ಲೆಗಳಲ್ಲಿ ಈ ದಾಳಿ ನಡೆಸಲಾಗಿದೆ. ಎನ್​ಐಎ ಅಧಿಕಾರಿಗಳಿಗೆ ಸಿಆರ್​​ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಸಾಥ್ ನೀಡಿದ್ದಾರೆ. ಅದೇ ರೀತಿ ಕರ್ನಾಟಕದ ಭಟ್ಕಳದಲ್ಲೂ ದಾಳಿ ನಡೆಸಿರೋ ಅಧಿಕಾರಿಗಳು ಜುಫ್ರಿ ಜವ್​​ಹರ್ ದಾಮುದಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಇವತ್ತು ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರು ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಇದ್ರಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.

-masthmagaa.com

Contact Us for Advertisement

Leave a Reply