350 ತಾಲಿಬಾನಿಗಳನ್ನು ಹೊಡೆದುರುಳಿಸಿದ ಪಂಜ್​ಶಿರ್​ ಗ್ಯಾಂಗ್​!

masthmagaa.com:

ಪಂಜ್​ಶಿರ್​ನಲ್ಲಿ ತಾಲಿಬಾನಿಗಳು ಮತ್ತು ಅಹ್ಮದ್ ಮಸ್ಸೌದ್ ನೇತೃತ್ವದ ನ್ಯಾಷನಲ್ ರೆಸಿಸ್ಟೆಂಟ್ ಫ್ರಂಟ್ ನಡುವೆ ಘರ್ಷಣೆ ಜೋರಾಗಿದೆ. ಇಲ್ಲಿನ ಖವಕ್​ ಅನ್ನೋ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ 350 ಮಂದಿ ತಾಲಿಬಾನಿಗಳನ್ನು ಹೊಡೆದುರುಳಿಸಿದ್ದೇವೆ. ಇನ್ನೂ 40 ಮಂದಿಯನ್ನು ಸೆರೆ ಹಿಡಿದು ಜೈಲಿನಲ್ಲಿ ಇಟ್ಟಿದ್ದೀವಿ ಅಂತ ನ್ಯಾಷನಲ್ ರೆಸಿಸ್ಟೆಂಟ್ ಫ್ರಂಟ್ ಘೋಷಿಸಿದೆ. ಜೊತೆಗೆ ಟ್ರೋಫಿ ರೂಪದಲ್ಲಿ ತಾಲಿಬಾನಿಗಳು ತಂದಿದ್ದ ಅಮೆರಿಕದ ಹಲವಾರು ವಾಹನಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡ್ಕೊಂಡಿದ್ದೀವಿ.

-masthmagaa.com

Contact Us for Advertisement

Leave a Reply