ಮುಂಬೈಗೆ ಮರಳಿದ ಪಾಂಡ್ಯ, ಆರ್‌ಸಿಬಿಗೆ ಬಂದ ಆಲ್‌ರೌಂಡರ್‌ ಯಾರು ಗೊತ್ತ?

masthmagaa.com:

IPL ಲೋಕದಲ್ಲಿ ಮೂರು ದಿನಗಳಿಂದ ಇದ್ದ ಎಲ್ಲಾ ಗೊಂದಲ-ಗುಮಾನಿಗಳಿಗೆ ತೆರೆಬಿದ್ದಿದ್ದು, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಮ್ಮ ತವರು ಟೀಮ್‌ಗೆ ಮರಳಿದ್ದಾರೆ. ಅಂದ್ರೆ ಮುಂಬೈ ಇಂಡಿಯನ್ಸ್‌ ತಂಡ ಸೇರಿದ್ದಾರೆ. ಗುಜರಾತ್‌ ಟೈಟನ್ಸ್‌ ತಂಡ ಪಾಂಡ್ಯಾಗೆ ಫೇರ್‌ವೆಲ್‌ ಪೋಸ್ಟ್‌ ಹಾಕಿ ಇದನ್ನ ಕನ್ಫರ್ಮ್‌ ಮಾಡಿದೆ. ʻಪಾಂಡ್ಯ ತಮ್ಮ ಒರಿಜಿನಲ್‌ ಟೀಮಿಗೆ ಮರಳೊ ಆಸೆ ವ್ಯಕ್ತಪಡಿಸಿದ್ದಾರೆ. ನಾವು ಅವ್ರ ನಿರ್ಧಾರಕ್ಕೆ ಗೌರವ ಕೊಡ್ತೇವೆʼ ಅಂತ GT ಸ್ಟೇಟ್‌ಮೆಂಟ್‌ ನೀಡಿದೆ. ಜೊತೆಗೆ ತನ್ನ ಸ್ಫೋಟಕ ಓಪನರ್‌ ಶುಭ್‌ಮನ್‌ ಗಿಲ್‌ಗೆ ನಾಯಕನ ಪಟ್ಟ ಕಟ್ಟಿದೆ. ಇತ್ತ ಮುಂಬೈ ತಂಡ ಪಾಂಡ್ಯರನ್ನ ವೆಲ್‌ಕಮ್‌ ಮಾಡಿಕೊಂಡಿದೆ. ಇನ್ನು ನಮ್ಮ RCB ಆಸ್ಟ್ರೇಲಿಯಾದ ಆರ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ರನ್ನ ಟ್ರೇಡ್‌ ಮಾಡಿದೆ. ಅಂದ್ಹಾಗೆ ಕಳೆದ ಬಾರಿ ಗ್ರೀನ್‌ ಮುಂಬೈ ತಂಡಕ್ಕೆ ಬರೋಬ್ಬರಿ 17.5 ಕೋಟಿ ರೂಪಾಯಿಗೆ ಸೇಲ್‌ ಆಗಿದ್ರು.

-masthmagaa.com

Contact Us for Advertisement

Leave a Reply