IPLನಲ್ಲಿ ಹಾರ್ದಿಕ್+GT ಟ್ವಿಸ್ಟ್!

masthmagaa.com:

ICC ವರ್ಲ್ಡ್‌ ಕಪ್‌ ಮುಗಿದ ಬೆನ್ನಲ್ಲೇ IPL ಸದ್ದು ಜೋರಾಗಿದೆ. ತೀವ್ರ ಕುತೂಹಲಕ್ಕೆರಳಿಸಿರೋ IPL ಮಿನಿ ಹರಾಜಿಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಕ್ತಿದೆ. ಕಳೆದ ಕೆಲವು ದಿನಗಳಿಂದ ಹಾರ್ದಿಕ್‌ ಪಾಂಡ್ಯ ಮುಂಬೈಗೆ ಹೋಗ್ತಾರೆ ಅನ್ನೋ ಸುದ್ದಿ ಓಡಾಡ್ತಿದ್ವು, ಆದ್ರೆ ಕಡೇ ಘಳಿಗೆಯಲ್ಲಿ ಗುಜರಾತ್‌ ಟೈಟಾನ್ಸ್‌ ಪಾಂಡ್ಯರನ್ನ ರಿಟೇನ್‌ ಮಾಡ್ಕೊಂಡಿದೆ. ಆದ್ರೆ ಟ್ರೇಡಿಂಗ್‌ ವಿಂಡೋ ಅಂದ್ರೆ ಆಟಗಾರರನ್ನ ಬೇರೆ ಟೀಂ ಜೊತೆಗೆ ಕೊಡು-ಕೊಳ್ಳುವ ವ್ಯವಹಾರಕ್ಕೆ ಇನ್ನು 2 ವಾರಗಳ ಸಮಯ ಇದೆ. ಅಂದ್ಹಾಗೆ ಡಿಸೆಂಬರ್‌ 19ಕ್ಕೆ ನಡೆಯಲಿರುವ ಮಿನಿ ಹರಾಜಿಗೂ ಮುನ್ನ 10 ತಂಡಗಳು ತಾವು ಕೈಬಿಡುವ ಹಾಗೂ ಉಳಿಸಿಕೊಳ್ಳುವ ಆಟಗಾರರ ಹೆಸರನ್ನ ಬಿಡುಗಡೆ ಮಾಡಲು ಇಂದು ಕೊನೆಯ ದಿನವಾಗಿತ್ತು. ಅದರಂತೆ ಎಲ್ಲಾ ತಂಡಗಳು ತಮ್ಮ ತಮ್ಮ ಪಟ್ಟಿಯನ್ನು ಅನೌನ್ಸ್‌ ಮಾಡಿವೆ. ಇದ್ರಲ್ಲಿ ನಮ್ಮ RCB ಹಸರಂಗ, ಹರ್ಷಲ್‌ ಪಟೇಲ್‌, ಕೇದರ್‌ ಜಾಧವ್‌ ಸೇರಿದಂತೆ ಒಟ್ಟು 11 ಆಟಗಾರರನ್ನ ಕೈಬಿಟ್ಟಿದೆ. ಈ ಮೂಲಕ RCB ಬಳಿ ಈಗ 40 ಕೋಟಿ ಇದೆ. ಅತ್ತ CSK ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್ ಸೇರಿ ಒಟ್ಟು 8 ಆಟಗಾರರನ್ನ ರಿಲೀಸ್‌ ಮಾಡಿದೆ. ಇನ್ನ ಮುಂಬೈ ಜೋಫ್ರಾ ಅರ್ಚರ್‌ ಸೇರಿದಂತೆ 11 ಆಟಗಾರರನ್ನ ಬಿಟ್ಟಿದೆ. ಅದೇ ರೀತಿ KKR ಶಕೀಬ್‌ ಸೇರಿದಂತೆ 12 ಆಟಗಾರರನ್ನ, ಗುಜರಾತ್‌ 8, ಪಂಜಾಬ್‌ 5, ಲಕ್ನೋ 8, ಹೈದರಾಬಾದ್‌ 6, ರಾಜಸ್ತಾನ್‌ 9 ಆಟಗಾರರನ್ನ ರಿಲೀಸ್‌ ಮಾಡಿವೆ.

-masthmagaa.com

Contact Us for Advertisement

Leave a Reply