RCBಗೆ ಆ್ಯಂಡಿ ಫ್ಲವರ್ ಹೊಸ ಮುಖ್ಯ ಕೋಚ್!

masthmagaa.com:

IPL ಕಪ್‌ ಗೆಲ್ಲುವಲ್ಲಿ ಈವರೆಗೂ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಂದಿನ ಸೀಸನ್‌ಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಮೊದಲ ಹೆಜ್ಜೆಯಾಗಿ ತಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಉನ್ನತ ಬದಲಾವಣೆ ಮಾಡಿದೆ. ಮಾಜಿ ಜಿಂಬಾಬ್ವೆ ಕ್ರಿಕೆಟಿಗ ಮತ್ತು ಇಂಗ್ಲೆಂಡ್‌ನ ಮಾಜಿ ಕೋಚ್ ಆ್ಯಂಡಿ ಫ್ಲವರ್ ಅವರನ್ನ ತಂಡದ ಹೊಸ ಮುಖ್ಯ ಕೋಚ್ ಆಗಿ RCB ಫ್ರಾಂಚೈಸ್ ನೇಮಿಸಿದೆ. ಇನ್ನು ಆ್ಯಂಡಿ ಫ್ಲವರ್ IPL​ನಲ್ಲಿ ಕಾಣಿಸಿಕೊಳ್ಳುತ್ತಿರೋದು ಇದೇ ಮೊದಲಲ್ಲ. ಬೆಂಗಳೂರಿಗಿಂತ ಮೊದಲು ಲಕ್ನೋ ಸೂಪರ್‌ಜೈಂಟ್ಸ್ ತಂಡದ ಜೊತೆ ಅವರು ಕೆಲಸ ಮಾಡಿದ್ದಾರೆ. ಫ್ಲವರ್ ಅಡಿಯಲ್ಲಿ, ಲಕ್ನೋ 2022 ಮತ್ತು 2023ರಲ್ಲಿ ಸತತವಾಗಿ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಲಕ್ನೋ ತಂಡಕ್ಕೆ ಸೇರುವ ಮೊದಲು ಫ್ಲವರ್ ಪಂಜಾಬ್ ಕಿಂಗ್ಸ್‌ ತಂಡದಲ್ಲೂ ಕೆಲಸ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply