ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಕ್ಕೆ ಅರೆಸ್ಟ್..!

ಇರಾನ್‍ನಲ್ಲಿ ಇನ್‍ಸ್ಟಾಗ್ರಾಂ ಸ್ಟಾರ್ ಒಬ್ಬರು ಹಾಲಿವುಡ್ ನಟಿ ಎಂಜೆಲಿನಾ ಜೂಲಿ ಅವರ ಸ್ಪೂಕಿ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕೆ ಧರ್ಮ ನಿಂದನೆ ಕೇಸ್‍ನಲ್ಲಿ ಅರೆಸ್ಟ್ ಮಾಡಲಾಗಿದೆ. ಸಹರ್ ತಬರ್ ಎಂಬುವವರ ಮೇಲೆ ಧರ್ಮನಿಂದನೆ ಮತ್ತು ಸಾಂಸ್ಕøತಿಕ ಅಪರಾಧ, ಸಾಮಾಜಿಕ ಮತ್ತು ನೈತಿಕ ಭ್ರಷ್ಟಾಚಾರದ ಕೇಸ್ ದಾಖಲಿಸಲಾಗಿದೆ.

ಸಹರ್ ತಬರ್ ತಮ್ಮ ಮುಖಕ್ಕೆ ಮೇಕಪ್ ಮಾಡಿ, ಎಂಜೆಲಿನಾ ಜೂಲಿಯವರ ಸ್ಪೂಕಿ ಚಿತ್ರದಂತೆ ಫೋಟೋ ತೆಗೆದು ಅದನ್ನು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್‍ನಲ್ಲಿ ಇನ್‍ಸ್ಟಾಗ್ರಾಂ ಬಳಕೆಗೆ ಮಾತ್ರವೇ ಅವಕಾಶ ಇದ್ದು, ಬೇರೆ ಯಾವುದೇ ಸೋಷಿಯಲ್ ಮೀಡಿಯಾ ಬಳಕೆಗೆ ಅವಕಾಶವಿಲ್ಲ. ಕಳೆದ ವರ್ಷ ತಮ್ಮ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಸಹರ್ ತಬರ್ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದರು. ಈ ಮೂಲಕ ಇನ್‍ಸ್ಟಾಗ್ರಾಂನಲ್ಲಿ ಫುಲ್ ಫೇಮಸ್ ಆಗಿದ್ದರು. ಕೆಲವೊಂದು ಫೋಟೋಗಳಲ್ಲಿ ಸಹರ್, ಹಿಜಾಬ್ ಧರಿಸಿ, ಮೂಗಿನ ಮೇಲೆ ಬ್ಯಾಂಡೇಜ್ ಕೂಡ ಹಾಕಿದ್ದರು.

https://www.instagram.com/p/Bq1NepFHbQE/?utm_source=ig_web_copy_link

Contact Us for Advertisement

Leave a Reply