ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಇರಾನ್‌ ಎಂಟ್ರಿ?

masthmagaa.com:

ಇಸ್ರೇಲ್‌, ಗಾಜಾ ಮೇಲಿನ ತನ್ನ ದಾಳಿಯನ್ನ ಮುಂದುವರೆಸಿದೆ. ಇದೀಗ ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್‌-ಶಿಫಾ ಕಾಂಪೌಂಡ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌ ಮಾಡಿದೆ. ಈ ದಾಳಿಯಲ್ಲಿ 13 ಜನ ಮೃತಪಟ್ಟಿದ್ದಾರೆ ಅಂತ ಆಸ್ಪತ್ರೆಯ ಡೈರಕ್ಟರ್‌ ಮೊಹಮ್ಮದ್‌ ಅಬು ಸಲ್ಮಿಯಾ ಹೇಳಿದ್ದಾರೆ. ಅತ್ತ ಮಹತ್ವದ ಬೆಳವಣಿಗೆಯಲ್ಲಿ ರೆಡ್‌ ಸೀ ಬಳಿ ನಿಯೋಜಿಸಲಾಗಿರುವ ಇಸ್ರೇಲ್‌ನ ಬ್ಯಾಲಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಸಿಸ್ಟಮ್‌ನ್ನ ಬಳಸಿಕೊಳ್ಳಲಾಗಿದೆ ಅಂತ ಇಸ್ರೇಲ್‌ ಹೇಳಿದೆ. ಇಸ್ರೇಲ್‌ನ Arrow 3 missile interceptor, ಯೆಮೆನ್‌ನ ಹೌತಿ ಬಂಡುಕೋರರು ಲಾಂಚ್‌ ಮಾಡಿದ್ದ ಬ್ಯಾಲಸ್ಟಿಕ್‌ ಮಿಸೈಲ್‌ ಒಂದನ್ನ ಹೊಡೆದುರುಳಿಸಿರೋದಾಗಿ ಹೇಳಿದೆ. ಈ ಡಿಫೆನ್ಸ್‌ ಸಿಸ್ಟಮ್‌ನ್ನ 2017ರಲ್ಲಿ ನಿಯೋಜಿಸಿದ್ದು, ಇದೇ ಮೊದಲ ಬಾರಿಗೆ ಉಪಯೋಗಿಸಲಾಗಿದೆ ಅ‍ಂತ ಇಸ್ರೇಲ್‌ ಹೇಳಿದೆ. ಅಂದ್ಹಾಗೆ ಇರಾನ್‌ನ ಥ್ರೆಟ್‌ನ್ನ ಸಮರ್ಥವಾಗಿ ಫೇಸ್‌ ಮಾಡೋ ಸಲುವಾಗಿ ಈ ಆ್ಯರೋ ಸಿಸ್ಟಮ್‌ನ್ನ ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಡೆವಲಪ್‌ ಮಾಡಿದ್ವು.

ಇತ್ತ ಇಸ್ರೇಲ್‌- ಹಮಾಸ್‌ ಯುದ್ಧ ಮಿಡಲ್‌ ಈಸ್ಟ್‌ನಾದ್ಯಂತ ಕಾಡ್ಗಿಚ್ಚಿನ ರೀತಿ ಹರಡ್ತಿರೋ ಲಕ್ಷಣಗಳು ಕಾಣ್ತಿವೆ. ಇದಕ್ಕೆ ಪುಷ್ಠಿ ಕೊಡುವಂತೆ ಹಮಾಸ್‌- ಇಸ್ರೇಲ್‌ ಯುದ್ಧ ಹರಡುವಿಕೆ ಅನಿವಾರ್ಯವಾಗಿದೆ ಅಂತ ಇರಾನ್‌ನ ವಿದೇಶಾಂಗ ಸಚಿವ ಹುಸ್ಸೇನ್‌ ಅಮೀರ್‌ ಅಬ್ದೊಲ್ಲಹಿಯಾನ್‌ ಎಚ್ಚರಿಸಿದ್ದಾರೆ. ಈ ಮೂಲಕ ಈ ಸಂಘರ್ಷ ಮಿಡಲ್‌ ಈಸ್ಟ್‌ನ್ನ ಆವರಿಸಿಕೊಳ್ಳೋದನ್ನ ಯಾರು ತಡೆಯೋಕೆ ಸಾಧ್ಯವಿಲ್ಲ ಅನ್ನೋ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಇನ್ನೊಂದ್‌ ಕಡೆ ಇರಾಕ್‌ ಹಾಗೂ ಸಿರಿಯಾದಲ್ಲಿರುವ ಅಮೆರಿಕದ ಸೇನಾಪಡೆಗಳ ಮೇಲೆ ಕಳೆದ ಒಂದು ತಿಂಗಳಿನಿಂದ ಇರಾನ್‌ ಬೆಂಬಲಿತ ಉಗ್ರಸಂಘಟನೆಗಳು ದಾಳಿ ಮಾಡ್ತಾನೆ ಇವೆ. ಅದಕ್ಕೆ ಪ್ರತ್ಯುತ್ತರ ಕೊಡ್ತಿರೋ ಅಮೆರಿಕ ಕೂಡ ಈಗ ಇರಾನ್‌ನ ಇಸ್ಲಾಮಿಕ್‌ ರೆವಲ್ಯುಶನರಿ ಗಾರ್ಡ್‌ನ ನೆಲೆ ಮೇಲೆ ಏರ್‌ಸ್ಟ್ರೈಕ್‌ ಮಾಡಿರೋದಾಗಿ ಹೇಳಿದೆ. ಅಂದ್ಹಾಗೆ ಕಳೆದ 3 ವಾರದಿಂದ ಅಮೆರಿಕ ನೆಲೆಗಳ ಮೇಲೆ ಸುಮಾರು 40 ಡ್ರೋನ್‌ ಹಾಗೂ ರಾಕೆಟ್‌ ದಾಳಿಯಾಗಿದೆ ಅಂತ ಪೆಂಟಗನ್‌ ಹೇಳಿದೆ.
ಅತ್ತ ಇಸ್ರೇಲ್‌ನ ಐಲಾಟ್‌ನಲ್ಲಿ ಸ್ಕೂಲ್‌ ಒಂದ್ರ ಮೇಲೆ ಸಿರಿಯಾದ ಉಗ್ರಸಂಘಟನೆಯೊಂದ್ರಿಂದ ರಾಕೆಟ್‌ ದಾಳಿಯಾಗಿದೆ ಅಂತ ಇಸ್ರೇಲ್‌ ಹೇಳಿದೆ. ಈ ದಾಳಿಗೆ ತಕ್ಕ ಉತ್ತರ ಕೊಡಲು ರಾಕೆಟ್‌ ಬಂದ ಕಡೆಗೆ ನಾವು ಕೂಡ ದಾಳಿ ನಡೆಸಿದ್ದೇವೆ. ಅಲ್ದೆ ಈ ಐಲಾಟ್‌ನ ಶಾಲೆ ಮೇಲೆ ನಡೆಸಿದ ಭಯೋತ್ಪಾದಕ ಕೃತ್ಯ ಸೇರಿದಂತೆ ಸಿರಿಯಾದಿಂದ ಬರೋ ಪ್ರತಿದಾಳಿಗೂ ಅಲ್ಲಿನ ಸರ್ಕಾರವೇ ನೇರ ಹೊಣೆ ಅಂತ ಇಸ್ರೇಲ್‌ ಸೇನೆ ಹೇಳಿದೆ. ಅತ್ತ ಈ ಯುದ್ಧದಲ್ಲಿ ಇಸ್ರೇಲ್‌ಗೆ ಸಪೋರ್ಟ್‌ ಮಾಡ್ತಿರೋ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತಕ್ಕೆ ಅರಬ್‌ ರಾಷ್ಟ್ರಗಳಲ್ಲಿರೋ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳು ವಾರ್ನ್‌ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಇಸ್ರೇಲ್‌ಗೆ ಸಪೋರ್ಟ್‌ ಮಾಡ್ತಿರೋದ್ರಿಂದ ಅರಬ್‌ ದೇಶಗಳಲ್ಲಿನ ನಾಗರಿಕರು ಅಮೆರಿಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದ್ರೆ ನಾವು ಈ ಭಾಗದಲ್ಲಿನ ವಿಶ್ವಾಸರ್ಹತೆ ಕಳೆದುಕೊಳ್ಳಬೇಕಾಗುತ್ತೆ ಅಂತ ಉನ್ನತ ಅಧಿಕಾರಿಗಳು ಎಚ್ಚರಿಸಿದ್ದಾರೆ ಅಂತ ಸಿಎನ್‌ಎನ್‌ ವರದಿ ಮಾಡಿದೆ.

ಇನ್ನು ಇದೆಲ್ಲದರ ನಡುವೆ ಹಮಾಸ್‌ ಉಗ್ರರು ತಮ್ಮ ಬಳಿ ಇಟ್ಕೊಂಡಿರೋ ಹಾಸ್ಟೇಜ್‌ ಒಬ್ರ ವಿಡಿಯೋ ಒಂದನ್ನ ರಿಲೀಸ್‌ ಮಾಡಿದೆ. ಮಾನವೀಯ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ಇಬ್ಬರು ಒತ್ತೆಯಾಳುಗಳನ್ನ ಬಿಡೋಕೆ ರೆಡಿ ಇದೀವಿ. ಆದ್ರೆ ಅದಕ್ಕೂ ಮೊದಲು ನಮ್ಮ ಷರತ್ತುಗಳಿಗೆ ಒಪ್ಪಿಗೆ ಕೊಡ್ಬೇಕು. ಆಗ ಮಾತ್ರ ರಿಲೀಸ್‌ ಮಾಡ್ತೀವಿ ಅಂತ ಹೇಳಿದ್ದು, ಆ ಕಂಡೀಷನ್ಸ್‌ ಕುರಿತು ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply