SCOಗೆ ಹೊಸ ದೇಶ ಎಂಟ್ರಿ! ಯಾವ ದೇಶಕ್ಕೆ ಸ್ವಾಗತ?

masthmagaa.com:

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ (SCO)ದ ಶೃಂಗಸಭೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇರಾನ್‌, SCOದ ಖಾಯಂ ಸದಸ್ಯತ್ವ ಸ್ಥಾನ ಪಡೆದುಕೊಂಡಿದೆ. ಈ ಕುರಿತು ಮಾತಾಡಿರೋ ಪ್ರಧಾನಿ ಮೋದಿ, ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಇರಾನ್‌ನ ಜನರಿಗೆ ಕಂಗ್ರ್ಯಾಟ್ಸ್‌ ಹೇಳಿದ್ದಾರೆ. SCO ಸೇರೋಕೆ ಇತರ ದೇಶಗಳು ಆಸಕ್ತಿ ತೋರಿಸೋದು, ಈ ಸಂಸ್ಥೆಯ ಪ್ರಾಮುಖ್ಯತೆಯನ್ನ ತಿಳಿಸುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ಬೆಲರೂಸ್‌ಗೂ SCOದ ಖಾಯಂ ಸದಸ್ಯತ್ವ ನೀಡುವ ಮೆಮೊರೆಂಡಮ್‌ಗೆ ಸಹಿ ಹಾಕಿದ್ದಾರೆ. ಈ ಮೂಲಕ ಬೆಲಾರೂಸ್‌ ಕೂಡ SCOದ ಖಾಯಂ ಸದಸ್ಯ ಆಗೋಕೆ ಬಹುತೇಕ ಹತ್ತಿರವಾದಂತಾಗಿದೆ. ಇನ್ನು ಹೊಸದಾಗಿ SCOದ ಸದಸ್ಯ ರಾಷ್ಟ್ರವಾಗಿರೋ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಮಾತಾಡಿ, ಭದ್ರತೆ ಹಾಗೂ ಸುಸ್ಥಿರ ಅಭಿವೃದ್ದಿಯನ್ನ ಅಚೀವ್‌ ಮಾಡುವಲ್ಲಿ, SCO ವೇದಿಕೆಯಲ್ಲಿ ಇರಾನ್‌ ಪ್ರಮುಖ ಸ್ಥಾನ ವಹಿಸುತ್ತೆ ಅಂತ ಭಾವಿಸುತ್ತೇನೆ. ಹಾಗೇ ಇತರ ಎಲ್ಲ ದೇಶಗಳ ಜೊತೆಗೆ ಒಗ್ಗಟ್ಟನ್ನ ಬೆಳೆಸುವಲ್ಲಿ ಕೂಡ ಇರಾನ್‌ ಕೆಲಸ ಮಾಡುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ 2001ರಲ್ಲಿ ಸ್ಥಾಪನೆಯಾಗಿದ್ದ ಶಾಂಘೈ ಸಹಕಾರ ಒಕ್ಕೂಟದಲ್ಲಿ ಪ್ರಸ್ತುತ ಇರಾನ್‌ ಸೇರಿ 9 ಸದಸ್ಯ ರಾಷ್ಟ್ರಗಳಿವೆ.

 

-masthmagaa.com

Contact Us for Advertisement

Leave a Reply