12 ಜನ ಆರೋಪಿಗಳನ್ನ ಒಂದೇ ದಿನ ಗಲ್ಲಿಗೇರಿಸಿದ ಇರಾನ್‌ ಸರ್ಕಾರ!

masthmagaa.com:

ಇರಾನ್‌ ಒಂದೇ ದಿನ ಬಲೂಚ್‌ನ 12 ಖೈದಿಗಳನ್ನ ಸಾಮೂಹಿಕವಾಗಿ ಗಲ್ಲಿಗೇರಿಸಿದೆ ಅಂತ ಎನ್‌ಜಿಒ ಒಂದು ತಿಳಿಸಿದೆ. ಇದು ಇಸ್ಲಾಮಿಕ್‌ ದೇಶಗಳಲ್ಲಿ ಹೆಚ್ಚುತ್ತಿರುವ ಮರಣದಂಡನೆಗಳ ಬಗ್ಗೆ ಕಳವಳ ಉಂಟಾಗುವಂತೆ ಮಾಡಿದೆ. ಇನ್ನು ಗಲ್ಲಿಗೇರಿಸಿದವರಲ್ಲಿ ಒಬ್ಬರು ಮಹಿಳೆಯಾಗಿದ್ದು 11 ಜನ ಪುರುಷರಾಗಿದ್ದಾರೆ. ಆರು ಜನ ಮಾದಕ ವಸ್ತುಗಳ ಆರೋಪಿಗಳಾಗಿದ್ದು, ಉಳಿದ ಆರು ಜನ ಕೊಲೆಯ ಆರೋಪದ ಮೇಲೆ ಜೈಲಿನಲ್ಲಿದ್ರು ಅಂತ ಹೇಳಲಾಗಿದೆ. ಇದೀಗ ಇವರನ್ನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಗೆ ಹತ್ತಿರದಲ್ಲಿರುವ ಸಿಸ್ತಾನ್-ಬಲುಚೆಸ್ತಾನ್ ಪ್ರಾಂತ್ಯದ ಜಹೇದನ್ ಎಂಬ ಮುಖ್ಯ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ ಅಂತ ನಾರ್ವೆ ಮೂಲದ ಇರಾನ್‌ ಹ್ಯೂಮನ್‌ ರೈಟ್ಸ್‌ ಹೇಳಿದೆ.

-masthmagaa.com

Contact Us for Advertisement

Leave a Reply