ಅಮೆರಿಕ ಇರಾನ್‌ ಪರಮಾಣು ಸಂಘರ್ಷ ಇತ್ಯರ್ಥ?

masthmagaa.com:

ಪರಮಾಣು ಒಪ್ಪಂದದ ವಿಚಾರವಾಗಿ ಇರಾನ್ ಸೇರಿದಂತೆ ಸೂಪರ್ ಪವರ್ ದೇಶಗಳ ಜೊತೆ ಮಾತುಕತೆಗೆ ನಾವು ಸಿದ್ಧ ಅಂತ ಅಮೆರಿಕ ಹೇಳಿದೆ. ಬರಾಕ್ ಒಬಾಮಾ ಅಧಿಕಾರದಲ್ಲಿದ್ದಾಗ ಇರಾನ್ ಜೊತೆ ಪರಮಾಣು ಒಪ್ಪಂದ ಮಾಡ್ಕೊಂಡು, ದೇಶದ ಹಿತದೃಷ್ಟಿಯಿಂದ ಮಾತ್ರವೇ ಪರಮಾಣು ಅಭಿವೃದ್ಧಿಗೆ ಅವಕಾಶ ನೀಡಲಾಗಿತ್ತು. ಆದ್ರೆ ಟ್ರಂಪ್ ಅವರು ಬಂದ ಬಳಿಕ ಈ ಒಪ್ಪಂದವನ್ನು ಮುರಿದುಕೊಂಡು ಬಿಟ್ಟಿದ್ರು. ಈಗ ಮತ್ತೆ ಹಳೆಯ ಒಪ್ಪಂದಗಳಿಗೆ ಇರಾನ್ ಒಪ್ಪೋದಾದ್ರೆ ನಾವು ಮತ್ತೆ ಒಪ್ಪಂದಕ್ಕೆ ರೆಡಿ ಅಂತ ಬೈಡೆನ್ ನೇತೃತ್ವದ ಅಮೆರಿಕ ಸರ್ಕಾರ ಹೇಳ್ತಿದೆ.

ಇದಕ್ಕೆ ಇರಾನ್ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಅಮೆರಿಕ ಏನಾದ್ರೂ ನಮ್ಮ ಮೇಲೆ ಹೇರಿರೋ ಆರ್ಥಿಕ ನಿರ್ಬಂಧವನ್ನ ತೆಗೆದ್ರೆ, ತಕ್ಷಣವೇ ಪರಮಾಣು ಶಸ್ತ್ರಾಸ್ತ್ರ ಕುರಿತ ನಮ್ಮ ನಿರ್ಧಾರವನ್ನ ಬದಲಿಸ್ತೀವಿ ಅಂತ ಇರಾನ್​ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಝರೀಫ್ ಹೇಳಿದ್ದಾರೆ. ಇದನ್ನ ನೋಡಿದ್ರೆ ಅಮೆರಿಕ ಮತ್ತು ಇರಾನ್​ ನಡುವಿನ ಸಂಘರ್ಷ ಸ್ವಲ್ಪ ಕಮ್ಮಿಯಾಗೋ ಲಕ್ಷಣ ಕಾಣ್ತಿದೆ. ಆದ್ರೆ ಈಗಲೇ ಎಲ್ಲವನ್ನ ಹೇಳೋಕ್ಕಾಗಲ್ಲ. ಈ ನಡುವೆ ಡೊನಾಲ್ಡ್​​ ಟ್ರಂಪ್ ಅಧಿಕಾರದಲ್ಲಿದ್ಧಾಗ ಇರಾನ್ ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ಪ್ರಧಾನ ಕಚೇರಿ ಇರುವ ನ್ಯೂಯಾರ್ಕ್​ನಲ್ಲಿ ಓಡಾಡಲು ನಿರ್ಬಂಧ ವಿಧಿಸಲಾಗಿತ್ತು. ಆದ್ರೀಗ ಬೈಡೆನ್ ಸರ್ಕಾರ ಆ ನಿರ್ಬಂಧವನ್ನು ತೆಗೆದುಹಾಕಿದೆ.

-masthmagaa.com

Contact Us for Advertisement

Leave a Reply