ಮದುವೆ ಮಾಡಿಸಲು ಡೇಟಿಂಗ್ ಆ್ಯಪ್​​ ಬಿಡುಗಡೆ ಮಾಡಿದ ಮೊದಲ ಮುಸ್ಲಿಂ ರಾಷ್ಟ್ರ

masthmagaa.com:

ಕುಸಿಯುತ್ತಿರೋ ಜನನ ಪ್ರಮಾಣದಿಂದ ಕಂಗೆಟ್ಟಿರೋ ಇರಾನ್​ನಲ್ಲಿ ಮದ್ವೆಗಳನ್ನ ಪ್ರೋತ್ಸಾಹಿಸಲು ಸರ್ಕಾರವೇ ಹೊಸ ಡೇಟಿಂಗ್ ಆ್ಯಪ್​​ ಅನ್ನ ಬಿಡುಗಡೆ ಮಾಡಿದೆ. ಇದಕ್ಕೆ ಹಮ್​ದಮ್ ಅಂತ ಹೆಸರಿಡಲಾಗಿದೆ. ಇಸ್ಲಾಮಿಕ್​ ರಿಪಬ್ಲಿಕ್​ ರಾಷ್ಟ್ರಗಳಲ್ಲಿ ಸರ್ಕಾರವೇ ಇಂಥಾ ಡೇಟಿಂಗ್ ಆ್ಯಪ್​ ಅನ್ನ ಬಿಡುಗಡೆ ಮಾಡಿರೋದು ಇದೇ ಮೊದಲು ಎನ್ನಲಾಗ್ತಿದೆ. ಅಂದ್ಹಾಗೆ ಜೋಡಿಗಳನ್ನ ಹುಡುಕಲು ಈ ಹಮ್​​ದಮ್​ ಆ್ಯಪ್​ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ ಬಳಸಿಕೊಳ್ಳುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಶಾಶ್ವತ ಮದುವೆ ಮತ್ತು ಒಬ್ಬ ಸಂಗಾತಿಯನ್ನ ಬಯಸುವ ಬ್ಯಾಚುಲರ್ಸ್​ಗೆ ಮಾತ್ರ ಈ ಆ್ಯಪ್​ ಅಂತ ಹೇಳಲಾಗಿದೆ. ಇರಾನ್​ನಲ್ಲಿ ಈ ಹಮ್​ದಮ್ ಆ್ಯಪ್ ಬಿಟ್ಟು ಬೇರೆಲ್ಲಾ ಡೇಟಿಂಗ್ ಆ್ಯಪ್​​ಗಳು ಕಾನೂನು ಬಾಹಿರ ಅಂತ ಘೋಷಿಸಲಾಗಿದೆ. ಅಂದ್ಹಾಗೆ ಇರಾನ್​ನಲ್ಲಿ ಜನ ತಡವಾಗಿ ಮದ್ವೆಯಾಗ್ತಿರೋದು ಮತ್ತು ಕುಸಿಯುತ್ತಿರೋ ಜನನ ಪ್ರಮಾಣದ ಬಗ್ಗೆ ಸ್ವತಃ ಅಲ್ಲಿನ ಸುಪ್ರೀಂ ಲೀಟರ್ ಅಯತುಲ್ಲಾ ಅಲಿ ಖಾಮಿನೇಯಿ ಹಲವು ಸಲ ಆತಂಕ ವ್ಯಕ್ತಪಡಿಸಿದ್ರು. ಮಾರ್ಚ್​ ತಿಂಗಳಲ್ಲಿ ಇರಾನ್​ ಸಂಸತ್​, ಪಾಪುಲೇಷನ್ ಗ್ರೋತ್ ಅಂಡ್​ ಸಪೋರ್ಟಿಂಗ್ ಫ್ಯಾಮಿಲೀಸ್​ ಅನ್ನೋ ಮಸೂದೆಯನ್ನ ಪಾಸ್ ಮಾಡಿತ್ತು. ಮದ್ವೆಯಾಗಲು ಜನರಿಗೆ ಹಣಕಾಸಿನ ನೆರವು ನೀಡೋದು ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಹೆರಲು ಪ್ರೋತ್ಸಾಹ ನೀಡೋದು ಈ ಮಸೂದೆಯ ಗುರಿಯಾಗಿದೆ. ಈ ಬಿಲ್​ಗೆ ಗಾರ್ಡಿಯನ್​ ಕೌನ್ಸಿಲ್​ನ ಅನುಮೋದನೆ ಬೇಕಿದೆ.

-masthmagaa.com

Contact Us for Advertisement

Leave a Reply