ಸೊಲೆಮನಿ ಹತ್ಯೆ ಸೇಡು ತೀರಿಸಿಕೊಳ್ತೀವಿ: ಟ್ರಂಪ್​​ಗೆ ಇರಾನ್ ವಾರ್ನಿಂಗ್

masthmagaa.com:

ಇರಾನ್​​ನ ರೆವಲೂಷನರಿ ಗಾರ್ಡ್​ ಕಾಪ್ಸ್​ ಕಮಾಂಡರ್ ಖಾಸಿಂ ಸೊಲೆಮನಿ ಹತ್ಯೆ ನಡೆದು 2 ವರ್ಷಗಳಾದ್ರೂ ಇರಾನ್ ಸಿಟ್ಟು ಕಡಿಮೆಯಾಗಿಲ್ಲ. ಇರಾಕ್​ನಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ 62 ವರ್ಷದ ಖಾಸಿಂ ಸೊಲೆಮನಿ ಸಾವು ಸಂಭವಿಸಿತ್ತು. ನಿನ್ನೆಗೆ ಈ ಘಟನೆ ನಡೆದು 2 ವರ್ಷವಾಗಿದೆ. ಈ ವೇಳೆ ಮಾತಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಖಾಸಿಂ ಸೊಲೆಮನಿ ಹತ್ಯೆಗೆ ಸೇಡು ತೀರಿಸಿಕೊಂಡೇ ಕೊಳ್ತೀವಿ. ಈ ಘಟನೆಯ ಆರೋಪಿಗಳು ಅಂದ್ರೆ ಅದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಫಾರಿನ್ ಸೆಕ್ರೆಟರಿಯಾಗಿದ್ದ ಮೈಕ್ ಪೊಂಪಿಯೋ.. ಇವರಿಬ್ಬರ ಜೊತೆಗೆ ಈ ಘಟನೆಗೆ ಕಾರಣವಾದ ಎಲ್ಲರಿಗೂ ಶಿಕ್ಷೆಯಾಗಲೇ ಬೇಕು.. ಇಲ್ಲದಿದ್ರೆ ಇರಾನ್ ಸುಮ್ಮನೆ ಬಿಡಲ್ಲ ಅಂತ ಹೇಳಿದ್ದಾರೆ. ಇರಾನ್ ನ್ಯಾಯಾಂಗದ ಉಪಮುಖ್ಯಸ್ಥ ಕಾಮೇಜ್ ಗರೀಬಾಬಾದಿ ಮಾತನಾಡಿ, ಸೊಲೆಮನಿ ಹತ್ಯೆ ಪ್ರಕರಣ ಸಂಬಂಧ ನಾವು ಅಮೆರಿಕದ 125 ಮಂದಿಯನ್ನು ಗುರುತಿಸಿದ್ದೀವಿ. ಇವರಲ್ಲಿ ಟ್ರಂಪ್ ಸರ್ಕಾರ ಮತ್ತು ಸೇನೆಯ ಅಧಿಕಾರಿಗಳು ಕೂಡ ಸೇರಿದ್ದಾರೆ. ಎಲ್ಲರಿಗೂ ಶಿಕ್ಷೆ ಕೊಡಿಸಲು ನಾವು ಬದ್ಧರಾಗಿದ್ದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply