ಇಸ್ರೇಲ್‌ ವಿರುದ್ಧ ದೊಡ್ಡ ಮಟ್ಟದ ದಾಳಿಯ ಎಚ್ಚರಿಕೆ ನೀಡಿದ ಇರಾನ್‌!

masthmagaa.com:

ಮಿಡ್‌ಈಸ್ಟ್‌ನಲ್ಲಿ ನಡೀತಿರೋ ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕಾದಾಟ ಸಧ್ಯಕ್ಕೆ ತಣ್ಣಗಾಗುವ ಯಾವುದೇ ಸೂಚನೆ ಕಾಣ್ತಿಲ್ಲ. ಇರಾನ್‌ ಮಾಡಿದ ದಾಳಿಗೆ ನಿನ್ನೆ ಇಸ್ರೇಲ್‌ ಪ್ರತಿದಾಳಿ ಮಾಡಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದರ ಬೆನ್ನಲ್ಲೆ ಈಗ ಇರಾನ್‌ ಮತ್ತೆ ಬೆಂಕಿ ಉಗುಳಿದೆ. ʻʻನಮ್ಮ ಮುಂದಿನ ಪ್ರತಿಕ್ರಿಯೆ ಬಹಳ ಕೆಟ್ಟದಾಗಿರಲಿದೆʼ ಅಂತ ವಾರ್ನ್‌ ಮಾಡಿದೆ. ಇರಾನ್‌ನ ವಿದೇಶಾಂಗ ಸಚಿವ ಹೊಸೆನ್‌ ಅಮೀರ್‌-ಅಬ್ದೊಲ್ಲಾಹಿಯಾನ್ ಈ ಬಗ್ಗೆ ಮಾತಾಡಿದ್ದಾರೆ, ʻಈ ದಾಳಿಗೂ ಇಸ್ರೇಲ್‌ಗೂ ಲಿಂಕ್‌ ಇರೋದು ಇದುವರೆಗೂ ಪ್ರೂವ್‌ ಆಗಿಲ್ಲ. ಸದ್ಯ ಈ ದಾಳಿ ಬಗ್ಗೆ ತನಿಖೆ ನಡೆಸಲಾಗ್ತಿದೆ. ಎಲ್ಲಿಯಾದ್ರೂ ಈ ದಾಳಿ ಇಸ್ರೇಲ್‌ ಕೈಯಿಂದಲೇ ಆಗಿದ್ದು ಅಂತ ಪ್ರೂವ್‌ ಆದ್ರೆ ಮಾತ್ರ ನಾವು ಸುಮ್ಮನಿರಲ್ಲ. ನಮ್ಮ ಪ್ರತೀಕಾರ ದೊಡ್ಡ ಮಟ್ಟದಲ್ಲಿ ಇರಲಿದೆ. ಇದು ಅತ್ಯಂತ ಕೆಟ್ಟ ಪರಿಣಾಮ ಬೀರಲಿದೆʼ ಅಂತ ಎಚ್ಚರಿಕೆ ನೀಡಿದ್ದಾರೆ. ಅಲ್ದೆ ʻಇರಾನ್‌ ಮೇಲೆ ನಡೆದಿರೋ ದಾಳಿಯಲ್ಲಿ ಬಳಸಿರೋ ಆಯುಧಗಳು ಯಾವುದೇ ಆಂಗಲ್‌ನಲ್ಲೂ ಡ್ರೋನ್‌ ಥರ ಇರಲಿಲ್ಲ. ನಮ್ಮ ಇರಾನ್ ಮಕ್ಕಳು ಆಡೋ ಆಟಿಕೆ ತರ ಇದ್ವುʼ ಅಂತ ಇರಾನ್‌ ಇಸ್ರೇಲ್‌ ಆಯುಧಗಳನ್ನ ಕಿಚಾಯಿಸಿದೆ. ಅಂದ್ಹಾಗೆ ಇರಾನ್ ಮೇಲಿನ ದಾಳಿಯನ್ನ ಇಸ್ರೇಲ್‌ ಇದುವರೆಗೂ ಒಪ್ಪಿಕೊಂಡಿಲ್ಲ. ಆದ್ರೆ ಅಮೆರಿಕದ ಅಧಿಕಾರಿಗಳು ಇಸ್ರೇಲ್‌ ದಾಳಿ ಬಗ್ಗೆ ಕನ್ಪರ್ಮ್‌ ಮಾಡಿದ್ರು. ಇನ್ನು ಈ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್‌ ಈಗ ಮಾತಾಡಿದ್ದಾರೆ. ನಾವು ಯಾವ್ದೇ ರೀತಿಯ ಆಕ್ರಮಣಾಕಾರಿ ಕಾರ್ಯಚರಣೆಗಳಲ್ಲಿ ಭಾಗಿಯಾಗಿಲ್ಲ ಅಂತೇಳಿದ್ದಾರೆ. ಈ ಮೂಲಕ ಇಸ್ರೇಲ್‌ ಏನಾದ್ರೂ ಇನ್ನೂ ಪ್ರತೀಕಾರ ಹೇಳೋಕೆ ಮುಂದಾದ್ರೆ ಅಮೆರಿಕ ಸಹಾಯ ಮಾಡಲ್ಲ ಅನ್ನೋ ರೀತಿ ಇವರು ಹೇಳಿಕೆ ಕೊಟ್ಟಿದ್ದಾರೆ. ಮೊನ್ನೆ ಕೂಡ ಬೈಡೆನ್‌ ಇದನ್ನೇ ನೆತನ್ಯಾಹು ಮುಂದೆ ಹೇಳಿದ್ರು..

ಇನ್ನೊಂದ್ಕಡೆ ಇರಾಕ್‌ನ ಸೆಂಟ್ರಲ್‌ನಲ್ಲಿರೋ ಮಿಲಿಟರಿ ಬೇಸ್‌ ಒಂದ್ರ ಮೇಲೆ ಸ್ಪೋಟ ನಡೆದಿದೆ. ಈ ಮಿಲಿಟರಿ ಬೇಸ್‌ನಲ್ಲಿ ಸೇನಾ ಪಡೆಗಳು ಮತ್ತು ಇರಾನ್‌ ಬೆಂಬಲಿತ ಅರೆಸೇನಾಪಡೆಗಳಿಗೆ ಆಶ್ರಯ ನೀಡಲಾಗ್ತಿತ್ತು ಅಂತ ಗೊತ್ತಾಗಿದೆ. ದಾಳಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಬೇಸ್‌ನಲ್ಲಿದ್ದ ಅನೇಕ ಶಸ್ತ್ರಾಸ್ತ್ರಗಳು ಮತ್ತು ವಾಹನಗಳ ಮೇಲೂ ದಾಳಿಯಾಗಿದೆ. ಈ ದಾಳಿಗೆ ಅಮೆರಿಕ ಕಾರಣ ಅಂತ ಸಾಕಷ್ಟು ಆರೋಪಗಳು ಬರ್ತಿದ್ವು. ಆದ್ರೆ ಅಮೆರಿಕ ಇದನ್ನ ನಿರಾಕರಣೆ ಮಾಡಿದೆ. ʻದಾಳಿಗೆ ನಾವು ಕಾರಣರಲ್ಲ. ನಮ್ಮ ಮೇಲೆ ಆರೋಪ ಹೇರಿ ಮಾಡಲಾಗಿರೋ ರಿಪೋರ್ಟ್‌ ಎಲ್ಲಾ ಶುದ್ಧ ಸುಳ್ಳುʼ ಅಂತ ಸ್ಪಷ್ಟನೆ ನೀಡಿದೆ.

-masthmagaa.com

Contact Us for Advertisement

Leave a Reply