ಹಿಜಬ್‌ ಧರಿಸದೆ ಕ್ರೀಡೆಯಲ್ಲಿ ಭಾಗವಹಿಸಿದ್ದ ಇರಾನ್‌ನ ಅಥ್ಲೀಟ್ ಕ್ಷಮೆಯಾಚನೆ!

masthmagaa.com:

ಇರಾನ್‌ನಲ್ಲಿ ನಡೆಯುತ್ತಿರೋ ಹಿಜಬ್‌ ವಿರೋಧಿ ಪ್ರತಿಭಟನೆ ದಿನಕ್ಕೊಂದು ತಿರುವು ಪಡಿತಲೇ ಇದೆ. ಇದರ ಮಧ್ಯೆ ಇರಾನ್‌ನ ಅಥ್ಲೀಟ್ ಒಬ್ಬರು ಹಿಜಬ್‌ ಧರಿಸದೇ ಕ್ರೀಡೆಯಲ್ಲಿ ಭಾಗವಹಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಇವ್ರು ಆಟದಿಂದ ವಾಪಾಸ್‌ ಬಂದಾಗ ಅಲ್ಲಿನ ಜನ ಅವ್ರಿಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇರಾನ್‌ನ ಅಥ್ಲೀಟ್ ಎಲ್ನಾಜ್‌ ರೆಕಬಿ ಇರಾನ್‌ ಆಡಳಿತವನ್ನ ಬಹಿರಂಗವಾಗಿ ವಿರೋಧಿಸಲು ಹಿಜಬ್‌ ಧರಿಸದೆ ರಾಕ್‌ ಕ್ಲೈಂಬಿಂಗ್‌ನಲ್ಲಿ ಭಾಗವಹಿಸಿದ್ದರು, ನಂತರ ತಮ್ಮನ್ನ ಬಂಧಿಸಬಹುದು ಅಂತ ಕಾಣೆಯಾಗಿದ್ದರು ಅಂತ ವರದಿಯಾಗಿತ್ತು. ಆದ್ರೆ ಘಟನೆಗೆ ಪ್ರತಿಕ್ರಿಯೆ ನೀಡಿರುವ ಎಲ್ನಾಜ್‌, ಆಟದಲ್ಲಿ ಭಾಗವಹಿಸೋ ವೇಳೆ, ಟೈಮ್‌ ಕಡಿಮೆ ಇತ್ತು. ಅಕಸ್ಮಾತ್‌ ಆಗಿ ಹಿಜಬ್‌ ಧರಿಸೋಕೆ ಆಗ್ಲಿಲ್ಲ. ಸೋ ಅದ್ರಿಂದ ಆಗಿರೋ ತೊಂದರೆಗೆ ನಾನು ಕ್ಷಮೆ ಕೇಳ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply