ಇಸ್ರೇಲ್-ಇರಾನ್ ಸಂಘರ್ಷ ತೀವ್ರ.. ನಡೆದೇ ಬಿಡುತ್ತಾ ದಾಳಿ!

masthmagaa.com:

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮುಂದುವರೀತಾ ಇದೆ. ಒಮನ್ ತೀರದಲ್ಲಿ ಇಸ್ರೇಲಿ ಟ್ಯಾಂಕರ್ ಮೇಲೆ ನಡೆದ ದಾಳಿ ಬಗ್ಗೆ ಮಾತನಾಡಿರೋ ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್​​​, ನಾವು ಇರಾನ್ ಮೇಲೆ ದಾಳಿ ನಡೆಸಲು ರೆಡಿ ಇದ್ದೀವಿ. ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಬೇಕು ಅಂತ ನನಗನ್ನಿಸುತ್ತೆ. ವಿಶ್ವದ ಇತರೆ ರಾಷ್ಟ್ರಗಳು ಕೂಡ ಇರಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಹೇಳಿದ್ಧಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಇರಾನ್​​, ನಮ್ಮನ್ನು ಪರೀಕ್ಷೆ ಮಾಡ್ಬೇಡಿ.. ಇರಾನ್ ವಿರುದ್ಧ ಯಾರು ಏನೇ ಕ್ರಮ ಕೈಗೊಂಡ್ರೂ ಉತ್ತರ ಕೊಡ್ತೀವಿ ಅಂತ ಕಿಡಿಕಾರಿದೆ. ಅಂದಹಾಗೆ ಕಳೆದ ವಾರ ಅರಬ್ಬೀ ಸಮುದ್ರದ ಒಮನ್ ತೀರದಲ್ಲಿ ಇಸ್ರೇಲ್​​ನ ಎಂಟಿ ಮೆರ್ಸರ್ ಟ್ಯಾಂಕರ್ ಮೇಲೆ ದಾಳಿ ನಡೆದಿತ್ತು. ಇದ್ರಲ್ಲಿ ಇಬ್ಬರು ಯೂರೋಪಿಯನ್ನರು ಪ್ರಾಣ ಬಿಟ್ಟಿದ್ರು. ಮತ್ತೊಂದ್ಕಡೆ ಇರಾನ್ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಖಾಮಿನೇಯ್ ಅವರ ಆಪ್ತರಾಗಿರೋ ಇವರು, ಜೂನ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ರು. ಪರಮಾಣು ಒಪ್ಪಂದದ ವಿಚಾರವಾಗಿ ಅಮೆರಿಕ ಸೇರಿದಂತೆ 6 ಸೂಪರ್​ ಪವರ್ ದೇಶಗಳ ಜೊತೆ ಸಂಘರ್ಷ ಇರಾನ್ ಎದುರಿಸುತ್ತಿರುವ ಹೊತ್ತಲ್ಲೇ ಇಬ್ರಾಹಿಂ ರೈಸಿ ಆಗಮನ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಹಿಂದೆ ಇವರು ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದು, ಈ ವೇಳೆ ಇವರ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯ ಆರೋಪಗಳು ಕೂಡ ಕೇಳಿ ಬಂದಿದ್ವು. ಇವರ ವಿರುದ್ಧ ಅಮೆರಿಕ ಹಲವು ನಿರ್ಬಂಧಗಳನ್ನು ಕೂಡ ವಿಧಿಸಿತ್ತು. ಆದ್ರೀಗ ಇದೇ ಇಬ್ರಾಹಿಂ ರೈಸಿ ಇರಾನ್ ಅಧ್ಯಕ್ಷರಾಗಿದ್ದು, ಪರಮಾಣು ವಿಚಾರವಾಗಿ ಅಮೆರಿಕ ಇರಾನ್ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಹೇರಿರೋ ನಿರ್ಬಂಧಗಳನ್ನು ತೆಗೆಯಲೇಬೇಕು.. ಅದಕ್ಕೆ ಬೇಕಾದ ಎಲ್ಲಾ ರಾಜಕೀಯ ಯೋಜನೆಗಳನ್ನು ನಾವು ಬೆಂಬಲಿಸುತ್ತೇವೆ. ಆದ್ರೆ ಒತ್ತಡ ಮತ್ತು ನಿರ್ಬಂಧದ ನೀತಿಯಿಂದ ಇರಾನ್ ಹಕ್ಕು ಕಿತ್ತುಕೊಳ್ಳಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply