1 ಗಂಟೆ ತಡವಾದ್ರೆ 100 ರೂ. ಪರಿಹಾರ..!

ಲಕ್ನೋ-ದೆಹಲಿ ನಡುವೆ ಭಾರತದ ಮೊದಲ ಮಿನಿ ಹೈಸ್ಪೀಡ್ ತೇಜಸ್ ರೈಲು ಸೇವೆ ಆರಂಭವಾಗಲಿದೆ. ಪ್ರಯಾಣಿಕರನ್ನು ಆಕರ್ಷಿಸಲು ಐಆರ್‍ಸಿಟಿಸಿ ಒಂದು ನಿರ್ಧಾರಕ್ಕೆ ಬಂದಿದೆ. ಪ್ರಯಾಣಿಕರಿಗೆ ವಿಮೆ ಜೊತೆಗೆ ರೈಲು ತಡವಾದ್ರೆ ಪರಿಹಾರವನ್ನೂ ನೀಡಲು ನಿರ್ಧರಿಸಲಾಗಿದೆ. ಅದರಂತೆ ಒಂದು ಗಂಟೆ ತಡವಾದ್ರೆ ಎಲ್ಲಾ ಪ್ರಯಾಣಿಕರಿಗೆ 100-100 ರೂಪಾಯಿ, 2 ಗಂಟೆ ತಡವಾದ್ರೆ 250 ರೂಪಾಯಿ ನೀಡೋದಾಗಿ ಘೋಷಿಸಿದೆ. ಬೇರೆ ಮಾರ್ಗಗಳಲ್ಲೂ ಈ ರೀತಿಯ ರೈಲ್ವೆ ಸೇವೆ ಆರಂಭಿಸಲು ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ. ವಾರದಲ್ಲಿ 6 ಬಾರಿ ಈ ರೈಲು ಲಕ್ನೋ-ದೆಹಲಿ ನಡುವೆ ಸಂಚರಿಸಲಿದೆ. ಸಂಜೆ 3.35ಕ್ಕೆ ದೆಹಲಿಯಿಂದ ಹೊರಟು ಅದೇ ದಿನ ರಾತ್ರಿ 10.5ಕ್ಕೆ ಲಕ್ನೋ ತಲುಪಲಿದೆ. ಅಕ್ಟೋಬರ್ 4ರಿಂದ ಈ ರೈಲ್ವೆ ಸೇವೆ ಆರಂಭವಾಗಲಿದೆ. ಫುಲ್ ಏರ್ ಕಂಡೀಷನ್ ಇರೋ ರೈಲು ಇದಾಗಿದ್ದು, ಸ್ವಯಂ ಚಾಲಿತ ಡೋರ್ ಕೂಡ ಹೊಂದಿದೆ.

Contact Us for Advertisement

Leave a Reply