ಸಿಂಧೂ ನಾಗರೀಕತೆ ಅವನತಿ ಬೃಹತ್‌ ಉಲ್ಕೆಯಿಂದ ಉಂಟಾಗಿದೆ!

masthmagaa.com:

ಪ್ರಪಂಚದ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ಸಿಂಧೂ ನಾಗರಿಕತೆ ಅವನತಿ ಮೀಟಿಯರ್‌ ಶವರ್‌ ಅಥವಾ ಉಲ್ಕೆಗಳಿಂದಾಗಿದೆ ಅನ್ನೋ ಹೊಸ ಥಿಯರಿ ಬಂದಿದೆ. ಉಲ್ಕೆಗಳ ಭಾಗ ಅಂತೇಳಲಾಗ್ತಿರೋ ಮೆಲ್ಟ್‌ ರಾಕ್‌ಗಳು ಅಂದ್ರೆ ಕರಗಿದ ಕಲ್ಲಿನ ಚೂರುಗಳು ಇದೀಗ ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಕೇರಳ ವಿವಿಯ ಭೂವಿಜ್ಞಾನ ವಿಭಾಗದ ಸಂಶೋಧಕರ ಸತತ 4 ವರ್ಷಗಳ ಪರಿಶ್ರಮದ ಫಲ ಈಗ ಲಭಿಸಿದಂತಾಗಿದೆ. ಸಿಂಧೂ ನಾಗರಿಕತೆ ಕಾಲದ ನಗರಗಳಲ್ಲೊಂದಾದ ಧೊಲಾವಿರಾದಿಂದ 200ಕಿಮೀ ದೂರದಲ್ಲಿರೋ ಲೂನಾ ಗ್ರಾಮದ ಬಳಿ ಈ ಶಿಲೆಗಳು ಪತ್ತೆಯಾಗಿವೆ. ಈ ಉಲ್ಕಾ ಶಿಲೆಗಳು 6900 ವರ್ಷಗಳ ಹಿಂದೆ ಭೂಮಿಗೆ ಬಂದು ಅಪ್ಪಳಿಸಿದೆ ಅಂತ ರೇಡಿಯೊ ಕಾರ್ಬನ್‌ ಡೇಟಿಂಗ್‌ನಿಂದ ಗೊತ್ತಾಗಿದೆ. ಅಂದ್ರೆ ಸುಮಾರು 4,800 BCE ಸಮಯದಲ್ಲಿ ಈ ಉಲ್ಕೆ ಬಿದ್ದಿರ್ಬೋದು ಅಂತ ಅಂದಾಜಿಸಲಾಗದೆ. ಇದು ಸಿಂಧೂ ನಾಗರೀಕತೆ ಪೀಕ್‌ನಲ್ಲಿದ್ದ ಸಮಯ. ಈ ಉಲ್ಕೆ ಅಪ್ಪಳಿಸಿದ ಪರಿಣಾಮ 2ಕಿಮೀ ಆಳದ ಗುಳಿ ನಿರ್ಮಾಣವಾಗಿದೆ ಅಂತೇಳಲಾಗ್ತಿದೆ. ಅದೇ ಲೂನಾ ಕ್ರೇಟರ್. ಇದು ಸುಮಾರು 200-400 ಮೀಟರ್‌ ಅಗಲ ಇದೆ ಅಂತ ಕೇರಳ ಯುನಿರ್ಸಿಟಿಯ ಸಹ ಪ್ರಾಧ್ಯಾಪಕ ಸಂಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply