ರಷ್ಯಾಗೆ ಜಿ-7 ದೇಶಗಳ ವಾರ್ನ್!

masthmagaa.com:

ಉಕ್ರೇನ್ ಕಡೆಯ ಗಡಿಯಲ್ಲಿ ಸೇನೆ ಹೆಚ್ಚಿಸಿ ಟೆನ್ಶನ್ ಕೊಡ್ತಿರೋ ರಷ್ಯಾಗೆ ಜಿ-7ದೇಶಗಳು ಎಚ್ಚರಿಕೆ ನೀಡಿವೆ. ರಷ್ಯಾ ತನ್ನ ಪ್ರಚೋದನಾತ್ಮಕ ಹೆಜ್ಜೆ ಬಿಟ್ಟು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಬೇಕು ಅಂತ ಆಗ್ರಹಿಸಿವೆ. ಇಂದಿನಿಂದ ಬ್ರಸೆಲ್ಸ್​​ನಲ್ಲಿ ನ್ಯಾಟೋ ಅಂದ್ರೆ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ಸ್​ ಸಭೆ ನಡೆಯಲಿದ್ದು, ಈ ನಡುವೆ ಜಿ-7 ದೇಶಗಳ ವಿದೇಶಾಂಗ ಸಚಿವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜಿ-7ನಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್​​, ಜೆರ್ಮನಿ, ಇಟಲಿ, ಜಪಾನ್, ಕೆನಡಾ ಸದಸ್ಯತ್ವ ಹೊಂದಿವೆ.. ಮೊದಲಿಗೆ ರಷ್ಯಾ ಕೂಡ ಈ ಒಕ್ಕೂಟದಲ್ಲಿತ್ತು. ಆಗ ಅದನ್ನು ಜಿ-8 ಅಂತ ಕರೆಯಲಾಗ್ತಾ ಇತ್ತು. ಆದ್ರೆ ರಷ್ಯಾ ಕ್ರಿಮಿಯಾವನ್ನು ವಶಕ್ಕೆ ಪಡೆದ ಬಳಿಕ ಜಿ-8ನಿಂದ ತೆಗೆದು ಹಾಕಲಾಯ್ತು.ಸೋ ಈಗ ಈ ಒಕ್ಕೂಟಕ್ಕೆ ಜಿ-7 ಅಂತ ಕರೆಯಲಾಗುತ್ತೆ. ಇವುಗಳ ಪೈಕಿ ಜಪಾನ್ ಒಂದು ಬಿಟ್ಟು ಉಳಿದೆಲ್ಲಾ ದೇಶಗಳು ನ್ಯಾಟೋದಲ್ಲೂ ಸದಸ್ಯತ್ವ ಹೊಂದಿವೆ.

-masthmagaa.com

Contact Us for Advertisement

Leave a Reply