ರಷ್ಯಾದಲ್ಲಿ ದಂಗೆ? ಪುಟಿನ್ ವಿರುದ್ಧವೇ ಸಿಟ್ಟು, ಸೆಡವು!

masthmagaa.com:

ಒಂದ್ಕಡೆ ಯುಕ್ರೇನ್​ನಲ್ಲಿ ರಷ್ಯಾ ದಾಳಿಯನ್ನು 30 ದಿನ ಕಳೆದ್ರೂ ಮುಂದುವರಿಸಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳ ಮೇಲೆ ನಿರ್ಬಂಧಗಳನ್ನು ವಿಧಿಸ್ತಿವೆ. ಮೇಲ್ನೋಟಕ್ಕೆ ರಷ್ಯಾ ಏನೂ ಆಗಿಲ್ಲ ಅನ್ನೋ ರೀತಿಯಲ್ಲಿ ವರ್ತಿಸ್ತಿದ್ರೂ ಒಳಗಿಂದೊಳಗೆ ರಷ್ಯಾದಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೀತಿವೆ.. 2000ನೇ ಇಸವಿಯಲ್ಲಿ ಪುಟಿನ್ ಅಧಿಕಾರಕ್ಕೆ ಬಂದ ಬಳಿಕ ಅವರ ಪಟ್ಟಕ್ಕೆ ಅತಿದೊಡ್ಡ ಕಂಟಕವೇ ಎದುರಾಗಿದೆ. ಯಾಕಂದ್ರೆ ಯುಕ್ರೇನ್ ಮೇಲಿನ ಯುದ್ಧ ವಿಚಾರದಲ್ಲಿ ರಷ್ಯಾ ಸರ್ಕಾರದ ಟಾಪ್ ವಲಯದಲ್ಲಿ ಪರಸ್ಪರ ಬ್ಲೇಮ್​ಗೇಮ್ ಶುರುವಾಗಿದೆ. ಪರಸ್ಪರ ಯುದ್ಧದಾಹಿ ಅಂತಲೋ, ದೇಶದ್ರೋಹಿ ಅಂತಲೋ ಕರೆದುಕೊಳ್ಳಲಾಗ್ತಿದೆ. ದೊಡ್ಡ ದೊಡ್ಡ ಅಧಿಕಾರಿಗಳ ನಡುವೆಯೇ ಪರಸ್ಪರ ಅಪನಂಬಿಕೆ ತಾಂಡವವಾಡೋಕೆ ಶುರುವಾಗಿದೆ. ರಷ್ಯಾದ ಇಂಟೆಲಿಜೆನ್ಸ್​ ಏಜೆನ್ಸಿ ಎಫ್​ಎಸ್​​​ಬಿ ನಿರ್ದಯ, ಅವಕಾಶವಾದಿಗಳಾಗಿದ್ದು, ದೇಶಭಕ್ತಿಯ ಉನ್ಮಾದದಿಂದ ಕೂಡಿದ ಯುದ್ಧಕ್ಕೆ ಅವರು ಯಾವತ್ತೂ ಸಪೋರ್ಟ್ ಮಾಡೋದಿಲ್ಲ. ಯಾಕಂದ್ರೆ ಇವರೆಲ್ಲರೂ ವ್ಲಾಡಿಮಿರ್ ಪುಟಿನ್ ಆರಾಧಕರಾಗಿದ್ದು, ಪುಟಿನ್ ರೀತಿಯಲ್ಲೇ ಪರ್ಸನಲ್ ಪವರ್​​ಗೆ ಹೆಚ್ಚಿನ ಮಹತ್ವ ನೀಡ್ತಾರೆ. ಅವರಿಗೆ ಹೆಚ್ಚೆಚ್ಚು ದುಡ್ಡು ಬೇಕು.. ಅದನ್ನು ಲಂಡನ್​​ನಂತ ದೊಡ್ಡ ನಗರಗಳಲ್ಲಿ ಆಸ್ತಿ ಖರೀದಿಸಲು ಬಳಸಬೇಕು. ತಮ್ಮ ಮಕ್ಕಳನ್ನು ಪಾಶ್ಚಿಮಾತ್ಯ ದೇಶಗಳ ಶಾಲಾ ಕಾಲೇಜುಗಳಿಗೆ ಕಳುಹಿಸಬೇಕು.. ಈ ರೀತಿಯ ಮನಸ್ಥಿತಿಯ ಅಧಿಕಾರಿಗಳು ಪುಟಿನ್ ಕೂಟದಲ್ಲಿದ್ದಾರೆ. ಹೀಗಿರುವಾಗ ನಿರ್ಬಂಧಗಳು ಈ ಅಧಿಕಾರಿಗಳು ಮತ್ತು ಪುಟಿನ್ ಆಪ್ತವಲಯದ ಕನಸುಗಳನ್ನು ಹಿಂಡಿ ಹಿಪ್ಪೆ ಮಾಡ್ತಿವೆ. ಆದ್ರೆ ಇವರಿಗೆ ರಷ್ಯಾ ಪಾಶ್ಚಿಮಾತ್ಯ ದೇಶಗಳ ದೃಷ್ಟಿಯಲ್ಲಿ ಉತ್ತರ ಕೊರಿಯಾ ಆಗೋಕೆ ಇಷ್ಟವಿಲ್ಲ. ಹಾಗಂತ ಎಫ್​ಎಸ್​​ಬಿ ರಷ್ಯಾದಲ್ಲಿ ಕ್ಷಿಪ್ರಕ್ರಾಂತಿ ಮಾಡಿ ಪುಟಿನ್​ರನ್ನ ಕೆಳಗಿಳಿಸೋಕೂ ಸಾಧ್ಯವಿಲ್ಲ. ಯಾಕಂದ್ರೆ ರಷ್ಯಾ ಇತಿಹಾಸದಲ್ಲಿ ಸೀಕ್ರೆಟ್ ಪೊಲೀಸ್, ಮಿಲಿಟರಿ ಮತ್ತು ರಾಜಕಾರಣಿಗಳು ಎಲ್ಲರೂ ಒಟ್ಟಾದಾಗ ಮಾತ್ರವೇ ಕ್ಷಿಪ್ರಕ್ರಾಂತಿ ಸಾಧ್ಯವಾಗಿದೆ. 1991ರಲ್ಲಿ ಮಿಖಾಯಿಲ್ ಗೋರ್ಬಚೆವ್​ರನ್ನು ಕಿತ್ತೊಗೆಯುವಾಗಲೂ ಅದೇ ರೀತಿ ನಡೆದಿತ್ತು. ಹೀಗಾಗಿ ಯಾರೂ ಪುಟಿನ್ ವಿರುದ್ಧ ಕ್ಷಿಪ್ರಕ್ರಾಂತಿಗೆ ಸಿದ್ಧವಿಲ್ಲ. ಆದ್ರೂ ಕೂಡ ಪುಟಿನ್ ಸುಮ್ನೆ ಕೂತಿಲ್ಲ. ಎರಡು ವಾರಗಳ ಹಿಂದೆ ಎಫ್​ಎಸ್​​​ಬಿ ಮುಖ್ಯಸ್ಥ ಕರ್ನಲ್ ಜನರಲ್ ಸರ್ಜೀ ಬೆಸೆಡ ಅವರನ್ನು ಅವರ ಡೆಪ್ಯುಟಿ ಅನಾಟೋಲಿ ಬೋಲ್ಯುಕ್​​ ಜೊತೆ ಅರೆಸ್ಟ್ ಮಾಡಲಾಗಿದೆ. ಅವರ ವಿರುದ್ಧ ಹಣ ದುರುಪಯೋಗ ಆರೋಪ ಮಾಡಲಾಗಿದೆ ಅನ್ನೋ ಆರೋಪ ಇದೆ. ಅದೇ ರೀತಿ ನ್ಯಾಷನಲ್ ಗಾರ್ಡ್​​​​​ನ ಡೆಪ್ಯುಟಿ ಹೆಡ್ ರೋಮನ್ ಗವ್​ರಿಲೊವ್​ರನ್ನು ಕೂಡ ಗುಪ್ತ ಮಾಹಿತಿ ಲೀಕ್ ಮಾಡಿದ ಆರೋಪದ ಮೇಲೆ ಅರೆಸ್ಟ್ ಮಾಡಿ ಒಳಗಿಡಲಾಗಿದೆ. ಇವರು ಅರೆಸ್ಟ್ ಆಗಿದ್ದಲ್ಲ.. ರಾಜೀನಾಮೆ ನೀಡಿದ್ದಾರೆ ಅಂತ ಕೂಡ ಹೇಳಲಾಗುತ್ತೆ.. ಈ ಮೂಲಕ ಟಾಪ್​ ರ್ಯಾಂಕ್​​ನ ಒಟ್ಟು 9 ಅಧಿಕಾರಿಗಳನ್ನು ಈವರೆಗೆ ಅರೆಸ್ಟ್ ಮಾಡಲಾಗಿದೆ. ಅದೇ ರೀತಿ ರಾಜಕಾರಣಿಗಳು ಕೂಡ ಇದ್ರಿಂದ ಹೊರತಾಗಿಲ್ಲ. ಪುಟಿನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಈಗಾಗಲೇ ಮಿಸ್ಸಿಂಗ್ ಲಿಸ್ಟ್ ಸೇರಿದ್ದಾರೆ. ನಿಮಗೆ ಶಾಕ್ ಆಗ್ಬೋದು.. ಯಾಕಂದ್ರೆ ಮಿಸ್ ಆಗಿರೋರ ಲಿಸ್ಟ್​ನಲ್ಲಿ ರಷ್ಯಾ ರಕ್ಷಣಾ ಸಚಿವ ಸರ್ಜೀ ಶೊಯ್ಗು ಕೂಡ ಇದ್ದಾರೆ. ಇವರು ಕಳೆದ 12 ದಿನಗಳಿಂದ ಪಬ್ಲಿಕ್ಕಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.. ಸಾರ್ವಜನಿಕವಾಗಿ ಇವರಿಗೆ ಹಾರ್ಟ್​ ಪ್ರಾಬ್ಲಂ ಅಂತ ಹೇಳಲಾಗಿದೆ. ಆದ್ರೆ ಇತ್ತೀಚೆಗೆ ಶೊಯ್ಗು ಅವರ ಮಗಳು ಯುಕ್ರೇನ್ ಫ್ಲಾಗ್ ಬಣ್ಣದ ಬಟ್ಟೆ ಧರಿಸಿ ಮಗು ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕ್ಕೊಂಡಿದ್ರು. ಇದಾದ ಬಳಿಕವೇ ಶೊಯ್ಗು ಕಾಣಿಸಿಕೊಳ್ತಿಲ್ಲ..ಇತ್ತೀಚೆಗೆ ಝೂಮ್ ಮೀಟಿಂಗ್ ನಡೆದಿದ್ದು, ಅದ್ರಲ್ಲಿ ಶೊಯ್ಗು ಭಾಗಿಯಾಗಿರುವಂತೆ ರಷ್ಯಾ ತೋರಿಸಿದೆ. ಆದ್ರೆ ಇದ್ರಲ್ಲಿ ಶೊಯ್ಗು ಭಾಗಿಯಾಗಿರಲಿಲ್ಲ. ಅವರ ಹಳೇ ವಿಡಿಯೋವನ್ನು ಬಳಸಿ ಪುಟಿನ್ ಜನರ ಕಣ್ಣಿಗೆ ಮಣ್ಣೆರಚೋ ಪ್ರಯತ್ನ ನಡೆಸ್ತಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಒಟ್ನಲ್ಲಿ ಸೋವಿಯತ್ ಒಕ್ಕೂಟ ವಿಘಟನೆಯಾದ ಬಳಿಕ ಇದೇ ಮೊದಲ ಬಾರಿಗೆ ರಷ್ಯಾ ರಾಜಕೀಯದ ಟಾಪ್ ವಲಯದಲ್ಲಿ ದೊಡ್ಡಮಟ್ಟದ ರೂಮರ್ಸ್​ ಶುರುವಾಗಿದೆ.

-masthmagaa.com

Contact Us for Advertisement

Leave a Reply