ಅಸ್ಸಾಂ ಪೊಲೀಸರ ದೊಡ್ಡ ಕಾರ್ಯಚರಣೆ! ಐಎಸ್‌ ಉಗ್ರರ ಬಂಧನ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಮೋಸ್ಟ್‌ ವಾಂಟೆಡ್‌ ಐಎಸ್‌ ಉಗ್ರ ಭಾರತದಲ್ಲಿ ಸಿಕ್ಕಿದ್ದಾನೆ. ಅಸ್ಸಾಂ ಪೊಲೀಸ್‌ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ದೊಡ್ಡ ಕಾರ್ಯಚರಣೆ ನಡೆಸಿ ಇಬ್ಬರು ಐಸಿಸ್‌ ಉಗ್ರರನ್ನ ಹೆಡೆಮುರಿ ಕಟ್ಟಿದೆ. ಅದರಲ್ಲಿ ಒಬ್ಬ ಭಾರತದ ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಕೂಡ ಸೇರಿದಾನೆ. ಆತನನ್ನ ಹ್ಯಾರಿಸ್‌ ಫಾರೂಕಿ ಅಂತ ಗುರುತಿಸಲಾಗಿದೆ. ಈತನ ಒಡನಾಡಿ ರೆಹಾನ್‌ ಕೂಡ ಅದೇ ಸಂಘಟನೆಯಲ್ಲಿ ಇಂಪಾರ್ಟೆಂಟ್‌ ರೋಲ್‌ ನಿಭಾಯಿಸ್ತಿದ್ದ ಅಂತ ಅಸ್ಸಾಂ ಪೊಲೀಸ್‌ ಹೇಳಿದೆ. ಗುಪ್ತಚರ ಮಾಹಿತಿ ಆಧರಿಸಿ ಇವರನ್ನ ಖೆಡ್ಡಾಗೆ ಕೆಡವಲಾಗಿದೆ. ಇವರು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಕ್ಯಾಂಪ್‌ ಮಾಡಿದ್ರು… ಅಸ್ಸಾಂನ ಧುಬ್ರಿ ಸೆಕ್ಟರ್‌ ಮೂಲಕ ಭಾರತದ ಗಡಿ ದಾಟಲಿದ್ದಾರೆ ಅನ್ನೋ ಮಾಹಿತಿ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ಗೆ ಲಭ್ಯವಾಗಿತ್ತು. ಅಲ್ಲಿಂದ ಭಾರತಕ್ಕೆ ಬಂದು ದೇಶದಲ್ಲಿ ವಿದ್ವಂಸಕ ನಡೆಸೋಕೆ ಈ ಇಬ್ಬರು ಪ್ಲಾನ್‌ ಮಾಡಿದ್ರು. ಇದ್ರ ಬೆನ್ಹತ್ತಿದ ಪೊಲೀಸರು ಈ ಎರಡೂ ಉಗ್ರ ಹುಳುಗಳನ್ನ ಬಂಧಿಸಿದೆ. ಭಾರತ ಗಡಿ ದಾಟಿದ ಕೂಡಲೇ ಈ ಉಗ್ರರನ್ನ ಯಶಸ್ವಿಯಾಗಿ ಅರೆಸ್ಟ್‌ ಮಾಡಲಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಪೊಲೀಸ್‌ ಅಧಿಕಾರಿಗಳು, ʻಸಾಕಾಷ್ಟು ಸಿಕ್ರೇಟ್‌ ಪ್ಲಾನ್‌ಗಳನ್ನ ಮಾಡಿ ಭಾರತದಲ್ಲಿ ಐಎಸ್ ಕರಿನೆರಳು ಹೆಚ್ಚು ಮಾಡೋಕೆ ಈ ಉಗ್ರರು ಪ್ರಯತ್ನಿಸಿದ್ರು. ಯುವಕರ ಬ್ರೇನ್‌ ವಾಶ್‌ ಮಾಡಿ ತಮ್ಮ ಉಗ್ರ ಸಂಘಟನೆಯಲ್ಲಿ ಸೇರೋಕೆ ನೇಮಕಾತಿ ಮಾಡ್ಕೊತಿದ್ರು. ಉಗ್ರ ಚಟುವಟಿಕೆಗಳಿಗೆ ಫಂಡಿಂಗ್ ಮಾಡ್ತಿದ್ರು. ಭಾರತದ ಹಲವೆಡೆ ಸ್ಫೋಟಕಗಳನ್ನ ಇಟ್ಟು ಉಗ್ರ ಕೃತ್ಯಗಳನ್ನ ಈಗಾಗಲೇ ಎಸಗಿದ್ದಾರೆ. ಇವ್ರು ಭಾರತದ ಭದ್ರತಾ ಏಜೆನ್ಸಿಗಳ ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿದ್ರು. NIA, ದೆಹಲಿ, ATS ಮತ್ತು ಲಕ್ನೋನಲ್ಲಿ ಈ ಉಗ್ರರ ವಿರುದ್ದ ಹಲವಾರು ಕೇಸ್‌ಗಳು ಈಗಲೂ ಪೆಂಡಿಂಗ್‌ನಲ್ಲಿವೆ. ಬಂಧಿತ ಉಗ್ರರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿ ಮಾಡೋಕೆ ಅಸ್ಸಾಂನ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ಇವ್ರನ್ನ NIAಗೆ ಒಪ್ಪಿಸುತ್ತೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply