ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಭಯೋತ್ಪಾದಕ ದಾಳಿ

masthmagaa.com:

ತಾನು ಐಎಸ್ ಉಗ್ರ ಅಂತ ಹೇಳಿಕೊಂಡ ವ್ಯಕ್ತಿಯೊಬ್ಬ ನ್ಯೂಜಿಲೆಂಡ್‌ನ ಆಕ್ಲಂಡ್ ನಲ್ಲಿ ದಾಳಿ ಮಾಡಿದ್ದಾನೆ. ಸೂಪರ್ ಮಾರ್ಕೆಟ್ ಗೆ ನುಗ್ಗಿದ ಈತ ಚಾಕುವಿನಿಂದ 6 ಜನರನ್ನ ಇರಿದು ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಈ ಉಗ್ರನನ್ನ ಬೇಟೆಯಾಡಿದ್ದಾರೆ. ಈತನನ್ನ ಸುತ್ತುವರಿದು ಎನ್ ಕೌಂಟರ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆಡ್ರೆನ್, ಈ ಘಟನೆ ದ್ವೇಷದಿಂದ ಕೂಡಿದೆ. ಇದು ಖಂಡನಾರ್ಹ ಅಂತ ಹೇಳಿದ್ದಾರೆ. ಅಂದಹಾಗೆ ನ್ಯೂಜಿಲೆಂಡ್ ಇತ್ತೀಚಿಗೆ ಪದೇ ಪದೇ ಭಯೋತ್ಪಾದಕ ದಾಳಿಗೆ ತುತ್ತಾಗ್ತಿದೆ. ಇದೇ ವರ್ಷದ ಮೇನಲ್ಲಿ ಡುನೆಡಿನ್ ನಗರದಲ್ಲೂ ಸೂಪರ್ ಮಾರ್ಕೆಟ್ ಒಂದರಲ್ಲಿ ಸೇಮ್ ಇದೆ ರೀತಿ ಘಟನೆ ಆಗಿತ್ತು. ಆಗ ದಾಳಿಕೋರ ನಾಲ್ಕು ಜನಕ್ಕೆ ಚಾಕು ತಿವಿದಿದ್ದ. ಅದಕ್ಕೂ ಹಿಂದೆ 2019ರಲ್ಲಿ ಕ್ರೈಸ್ಟ್ ಚರ್ಚ್ ಮಸೀದಿ ಮೇಲಿನ ದಾಳಿಯಲ್ಲಿ 51 ಜನ ಸಾವನ್ನಪ್ಪಿ, 40ಕ್ಕೂ ಅಧಿಕ ಜನ ಗಾಯಗೊಂಡಿದ್ದರು.

-masthmagaa.com

Contact Us for Advertisement

Leave a Reply