ಸೌದಿಯಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ವ್ಯಕ್ತಿಗೆ ಗಲ್ಲು!

masthmagaa.com:

ಸೌದಿ ಅರೇಬಿಯಾದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಯೆಮನ್ ಮೂಲದ ಐಎಸ್ ಸಂಘಟನೆಗೆ ಸೇರಿದ ವ್ಯಕ್ತಿಯನ್ನು ಗಲ್ಲಿಗೇರಿಸಲಾಗಿದೆ. ಅತಿ ಹೆಚ್ಚು ಮರಣದಂಡನೆ ಪ್ರಮಾಣ ಹೊಂದಿರೋ ಸೌದಿಯಲ್ಲಿ 2014ರಿಂದ ಐಎಸ್​​​​​​​​​​​ ಉಗ್ರರಿಂದ ಶೂಟಿಂಗ್, ಸ್ಫೋಟದಂತ ದಾಳಿಗಳು ನಡೆಯುತ್ತಲೇ ಇವೆ. ಅದ್ರ ಭಾಗವಾಗಿಯೇ ಯೆಮನ್ ಮೂಲದ ಮೊಹ್ಮದ್ ಅಲ್ ಸದ್ದಾಮ್ ಅನ್ನೋನು ಹೆಚ್ಚು ಜನ ಸೇರೋ ಸಾರ್ವಜನಿಕ ಸ್ಥಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಅನ್ನೋದು ಆರೋಪ.. ಹೀಗಾಗಿ ಆತನನ್ನು ನಿನ್ನೆ ರಿಯಾದ್​​ನಲ್ಲಿ ಗಲ್ಲಿಗೇರಿಸಲಾಗಿದೆ. ಇಲ್ಲಿ 2020ರಲ್ಲಿ ಗಲ್ಲು ಶಿಕ್ಷೆ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಆದ್ರೆ ಈ ವರ್ಷ ಜನವರಿಯಿಂದ ಜುಲೈವರೆಗೆ 40 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಅಂತ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಸಂಸ್ಥೆ ಮಾಹಿತಿ ನೀಡಿತ್ತು. ಆದ್ರೆ ಈ ವರ್ಷ ಈವರೆಗೆ 70 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಅಂತ ಎಎಫ್​ಪಿ ಮಾಧ್ಯಮ ತಿಳಿಸಿದೆ. 2019ರಲ್ಲಿ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಅಂದ್ರೆ 184 ಮಂದಿಯನ್ನು ಗಲ್ಲಿಗೇರಿಸಲಾಗಿತ್ತು.

-masthmagaa.com

Contact Us for Advertisement

Leave a Reply