ಅಮೆರಿಕ ಯಾಕೆ ಗ್ರೇಟ್ ಗೊತ್ತಾ? ಈ ಉದಾಹರಣೆ ನೋಡಿ!

masthmagaa.com:

ಅಮೆರಿಕವನ್ನ ಸೂಪರ್ ಪವರ್ ಅಂತ ಕರೆಯೋದು ಕೇವಲ ಅವರ ಬಳಿ ದುಡ್ಡಿದೆ, ದೊಡ್ಡ ಸೇನೆ ಇದೆ, ಭಾರೀ ಶಸ್ತ್ರಾಸ್ತ್ರ ಇದೆ ಅನ್ನೋ ಕಾರಣಕ್ಕೆ ಮಾತ್ರ ಅಲ್ಲ. ಅಮೆರಿಕ ಸೂಪರ್ ಪವರ್ ಆಗಿರೋದು ಅದು ತನ್ನ ಶಕ್ತಿಯನ್ನ ಜಗತ್ತಿನ ಮುಂದೆ ಡೆಮಾನಸ್ಟ್ರೇಟ್ ಮಾಡೋ ರೀತಿಗೆ., ಅಂದ್ರೆ ಹಟ ಸಾಧಿಸೋ ರೀತಿಗೆ. ಈಗ ಅಫ್ಘಾನಿಸ್ತಾನದಲ್ಲಿ ಅಮೆರಿಕಕ್ಕೆ 20 ವರ್ಷಗಳ ಬಳಿಕ ಹಿನ್ನಡೆ ಆಗಿರಬೊದು. ಆದ್ರೆ ಇಡೀ ವಿಶ್ವದಲ್ಲಿ ಅಮೆರಿಕ ಹಟ ಸಾಧಿಸೋ ರೀತಿಗೆ ಬೇರೆ ಯಾರೂ ಸಾಟಿ ಇಲ್ಲ. ತನ್ನ ದೇಶದ ಪ್ರಜೆಗಳಿಗೆ ವಿಶ್ವದ ಯಾವುದೇ ಮೂಲೆಯಲ್ಲಿ ಅನ್ಯಾಯ ಆದರೂ ಅಮೆರಿಕ ಸುಮ್ಮನೆ ಕೂರೋದಿಲ್ಲ. ಅದಕ್ಕೆ ಮತ್ತೊಂದು ಸಾಕ್ಷಿ ಅಲೆಕ್ಸಾಂಡಾ ಕೋಟೇಯ್ ಕೇಸ್. ಈ ಐಎಸ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ. ಪಾಶ್ಚಿಮಾತ್ಯ ನಾಗರಿಕರನ್ನ ಕಿಡ್ನಾಪ್ ಮಾಡ್ತಿದ್ದ ಐಸ್ ಉಗ್ರರ ಬೀಟೆಲ್ ಗ್ಯಾಂಗ್ ಸದಸ್ಯ ಈತ. 37 ವರ್ಷದ ಕೋಟೇಯ್ ಹಾಗೂ 33 ವರ್ಷದ ಎಲ್ ಶಫೀ ಎಲ್ಶೇಖ್ ಮೇಲೆ ಅಮೆರಿಕ ಪತ್ರಕರ್ತರಾದ ಜೇಮ್ಸ್ ಫೋಲೇಯ್, ಸ್ಟೀವನ್ ಸಾಟ್ಲಾಫ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪೀಟರ್ ಕಿಸ್ಸಿಗ್ ಹಾಗೂ ಕೇಯ್ಲಾ ಮುಲ್ಲರ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಇತ್ತು. ಮೂಲತಹ ಬ್ರಿಟನ್‌ನವರಾದ ಇವ್ರು ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಆದ್ರೆ 2018ರಲ್ಲಿ ಸಿರಿಯಾದಲ್ಲಿ ಇವರು ಇರೋದು ಗೊತ್ತಾಯ್ತು. ಆದ್ರೆ ಸಿರಿಯಾ ಅಂತರ್ಯುದ್ಧದಿಂದ ಬಳಲಿ ಬೆಂಡಾಗಿರೋ ದೇಶ. ಕಾನೂನು-ವ್ಯವಸ್ಥೆ ಎಲ್ಲ ಬಿದ್ದೋಗಿದೆ ಅಲ್ಲಿ. ಹೀಗಾಗಿ ಸಿರಿಯಾದ ಖುರ್ದಿಷ್ ಬಂಡುಕೋರ ಪಡೆಯೊಂದಿಗೆ ಡೀಲ್ ಮಾಡಿಕೊಂಡ ಅಮೆರಿಕ ಅವರ ಮೂಲಕ ಇವ್ರಿಬ್ಬರನ್ನ ಸೆರೆ ಹಿಡಿಸಿತು. ನಂತರ ಇರಾಖಿಗೆ ಕರೆದುಕೊಂಡು ಬಂದು, ಅಲ್ಲಿಂದ ಸೀದಾ ಅಮೆರಿಕಕ್ಕೆ ಏರ್ ಲಿಫ್ಟ್ ಮಾಡಲಾಯ್ತು. ಇವರು ಬ್ರಿಟಿಷ್ ಪ್ರಜೆಗಳಾಗಿದ್ದರಿಂದ ಬ್ರಿಟನ್ ಗೆ ಹೇಳಿ, ಅಲ್ಲಿನ ಸರ್ಕಾರ ಇವರ ಬ್ರಿಟಿಷ್ ಪೌರತ್ವ ತೆಗೆದು ಹಾಕುವಂತೆ ನೋಡಿಕೊಳ್ತು ಅಮೆರಿಕ. ನಂತರ ವರ್ಜೀನಿಯಾದ ಕೋರ್ಟ್ ನಲ್ಲಿ ವಿಚಾರಣೆ ನಡೀತು. ಈಗ ಫೈನಲಿ ಆರೋಪಿ ಕೋರ್ಟ್ ಮುಂದೆ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ. ಈ ಮೂಲಕ ಈತ ಜೀವಮಾನ ಪೂರ್ತಿ ಇನ್ಮೇಲೆ ಹೊರ ಪ್ರಪಂಚ ನೋಡೋಕೆ ಸಾಧ್ಯ ಆಗಲ್ಲ.

-masthmagaa.com

Contact Us for Advertisement

Leave a Reply