ಹಮಾಸ್ ನಾಯಕನಾಗಿ ಮರು ಆಯ್ಕೆಯಾದ ಇಸ್ಮೈಲ್​​!

masthmagaa.com:

ಇಸ್ರೇಲ್​​ನ್ನು ಸರ್ವನಾಶ ಮಾಡೋ ಕನಸು ಕಾಣ್ತಿರೋ ಹಮಾಸ್​ ಪಡೆ ಇಸ್ಮೈಲ್ ಹನಿಯೇರನ್ನು ಮತ್ತೆ ತಮ್ಮ ಸರ್ವೋಚ್ಛ ನಾಯಕರನ್ನಾಗಿ ಆಯ್ಕೆ ಮಾಡ್ಕೊಂಡಿದೆ. ಆಂತರಿಕ ಚುನಾವಣೆ ಮೂಲಕ ಇಸ್ಮೈಲ್ ಆಯ್ಕೆ ಮಾಡಲಾಗಿದ್ದು, ಇದ್ರಲ್ಲಿ ಸಾವಿರಾರು ಸದಸ್ಯರು ಭಾಗಿಯಾಗಿದ್ರು ಅಂತ ಹಮಾಸ್ ತಿಳಿಸಿದೆ. 2017ರಿಂದಲೂ ಹಮಾಸ್​​​​​​ ಸಂಘಟನೆಯ ರಾಜಕೀಯ ಬ್ಯೂರೋದ ಮುಖ್ಯಸ್ಥರಾಗಿರೋ ಇಸ್ಮೈಲ್ ಹನಿಯೇ, ಪ್ಯಾಲೆಸ್ತೇನ್​​ನಿಂದ ಗಡೀಪಾರಾಗಿದ್ದಾರೆ. ಇವರು ಸ್ವಲ್ಪ ಟೈಂ ಟರ್ಕಿಯಲ್ಲಿ ಮತ್ತು ಸ್ವಲ್ಪ ಟೈಂ ಖತಾರ್​ನಲ್ಲಿ ಕಳೀತಾರೆ. ಅಂದಹಾಗೆ ಇತ್ತೀಚೆಗೆ ಹಮಾಸ್ ನಿಯಂತ್ರಣದ ಗಾಜಾಪಟ್ಟಿ ಮತ್ತು ಇಸ್ರೇಲ್ ನಡುವೆ 11 ದಿನಗಳ ಸಂಘರ್ಷದ ಬಳಿಕ ಈಜಿಪ್ಟ್​ ಮಧ್ಯಸ್ಥಿಕೆ ವಹಿಸಿದ ಮಾತುಕತೆಯಲ್ಲಿ ಅವರು ಕೂಡ ಭಾಗಿಯಾಗಿದ್ರು. ಇವರು ಹಮಾಸ್ ಸಂಸ್ಥಾಪಕ ಅಹ್ಮದ್ ಯಾಸೀನ್ ಜೊತೆ ಕೆಲಸ ಮಾಡಿದ್ರು. ಯಾಸೀನ್​ರನ್ನು 2004ರಲ್ಲಿ ಇಸ್ರೆಲ್ ಏರ್​​ಸ್ಟ್ರೈಕ್​ನಲ್ಲಿ ಹತ್ಯೆ ಮಾಡಿತ್ತು. 2006ರಲ್ಲಿ ಸಂಸದೀಯ ಚುನಾವಣೆ ಗೆದ್ದ ಬಳಿಕ ಇಸ್ಮೈಲ್ ಹನಿಯೇರನ್ನು ಪ್ಯಾಲೆಸ್ತೇನ್​​ ಪ್ರಧಾನಿಯಾಗಿ ನೇಮಿಸಲಾಗಿತ್ತು. ಆದ್ರೆ ಪ್ಯಾಲೆಸ್ತೇನ್ ರಾಜಕೀಯ ಪಕ್ಷ ಫತ್ಹಾ ಮತ್ತು ಹಮಾಸ್​​ ನಡುವೆ ಬಿಕ್ಕಟ್ಟು ಎದುರಾಗಿ, ಅಧ್ಯಕ್ಷ ಮೊಹಮೂದ್ ಅಬ್ಬಾಸ್​​ ಇಸ್ಮೈಲ್​ರನ್ನು ಪ್ರಧಾನಿ ಹುದ್ದೆಯಿಂದ ತೆಗೆದು ಹಾಕಿದ್ರು. ಆದ್ರೂ ಕೂಡ ಈ ಆದೇಶವನ್ನು ಇಸ್ಮೈಲ್ ಒಪ್ಪಿಕೊಂಡಿರಲಿಲ್ಲ. 2017ರಲ್ಲಿ ಹಮಾಸ್ ರಾಜಕೀಯ ಬ್ಯೂರೋದ ಮುಖ್ಯಸ್ಥರಾಗುವವರೆಗೂ ತಮ್ಮನ್ನು ತಾವು ಪ್ರಧಾನ ಮಂತ್ರಿ ಅಂತಲೇ ಹೇಳಿಕೊಂಡು ಬಂದಿದ್ದರು. ಇದೀಗ ಅವರೇ ಅವಿರೋಧವಾಗಿ ಹಮಾಸ್ ಪಡೆಯ ಸರ್ವೋಚ್ಛ ನಾಯಕರಾಗಿ ಆಯ್ಕೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply