ಇಸ್ರೇಲ್- ಗಾಜಾ ನಡುವೆ ಹೊಸ ಗಲಾಟೆ! ಶುರುವಾಗುತ್ತಾ ಮತ್ತೊಂದು ಸಂಘರ್ಷ..?

masthmagaa.com:

ಮತ್ತೊಂದ್ಕಡೆ ಇಸ್ರೇಲ್ ಮತ್ತು ಗಾಜಾ ಸಂಘರ್ಷ ಕೂಡ ಜೋರಾಗ್ತಿದೆ. ಮೊನ್ನೆ ಭಾನುವಾರವಷ್ಟೇ ಗಾಜಾ ಗಡಿಯಲ್ಲಿ ಸಂಘರ್ಷ ನಡೆದು, ಹಮಾಸ್ ತಾಣಗಳ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್ ಮಾಡಿತ್ತು. ಸಂಘರ್ಷದಲ್ಲಿ ಓರ್ವ ಬಾಲಕ ಸೇರಿದಂತೆ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ರು. ಇಸ್ರೇಲಿ ಯೋಧ ಕೂಡ ಗಾಯಗೊಂಡಿದ್ರು. ಅದ್ರ ಬೆನ್ನಲ್ಲೇ ಗಾಜಾ ಪಟ್ಟಿ ಕಡೆಯಿಂದ ಫೈರ್ ಬಲೂನ್​ಗಳನ್ನು ಹಾರಿಸಿದ್ದು, ದಕ್ಷಿಣ ಇಸ್ರೇಲ್​ನ ಹಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದಕ್ಕೆ ಉತ್ತರವಾಗಿ ಮತ್ತೆ ಇಸ್ರೇಲ್ ಹಮಾಸ್ ತಾಣಗಳ ಮೇಲೆ ಏರ್​ಸ್ಟ್ರೈಕ್ ನಡೆಸಿದೆ. ಆದ್ರೆ ದಾಳಿಯಲ್ಲಿ ಸಾವುನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply