ಸಿರಿಯಾ – ಇಸ್ರೇಲ್‌ ಸಂಘರ್ಷ ಶುರು!

masthmagaa.com:

ಸಿರಿಯಾದ ಡಮಾಸ್ಕಸ್ ಮೇಲೆ ಇಸ್ರೇಲ್ ವಾಯುಸೇನೆ ಏರ್​ಸ್ಟ್ರೈಕ್ ನಡೆಸಿದೆ. ಆದ್ರೆ ಇಸ್ರೇಲ್ ಕ್ಷಿಪಣಿಯನ್ನು ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದ್ರೆ ಒಂದಷ್ಟು ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಅಂತ ಸಿರಿಯಾ ಮಾಧ್ಯಮಗಳು ವರದಿ ಮಾಡಿವೆ. ಕಳೆದೆರಡು ವಾರಗಳಲ್ಲಿ ನಡೆದ 2ನೇ ದಾಳಿ ಇದಾಗಿದೆ. ಈ ಹಿಂದೆ ಆಗಸ್ಟ್​ 19ರಂದು ಕೂಡ ಇದೇ ಡಮಾಸ್ಕಸ್ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್ ನಡೆಸಿತ್ತು. ಆದ್ರೆ ಇಸ್ರೇಲ್ ಮಾತ್ರ ಸಿರಿಯಾ ಕಡೆಯಿಂದ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಅಂತ ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇಸ್ರೇಲ್ ಸೇನೆ, ಸಿರಿಯಾದಿಂದ ಇಸ್ರೇಲ್​​​ ಕಡೆಗೆ ಸರ್ಫೇಸ್​​ ಟು ಏರ್ ಮಿಸೈಲ್​​​​​ ಉಡಾವಣೆ ಮಾಡಲಾಗಿದ್ದು, ಅದು ಮೆಡಿಟರೇನಿಯನ್ ಸಮುದ್ರಕ್ಕೆ ಹೋಗಿ ಬಿದ್ದಿದೆ. ಸೆಂಟ್ರಲ್ ಇಸ್ರೇಲ್​​ನ ಹಲವರು ಸ್ಫೋಟಗೊಂಡ ಕ್ಷಿಪಣಿಯ ಕೆಲ ಭಾಗಗಳನ್ನು ಕೂಡ ಪತ್ತೆಹಚ್ಚಿದ್ದಾರೆ ಅಂತ ತಿಳಿಸಿದೆ. ಲೆಬನಾನ್ ವಾಯುಪ್ರದೇಶದ ಮೂಲಕ ಈ ಕ್ಷಿಪಣಿ ದಾಳಿ ನಡೆದಿದ್ದು, ಲೆಬನಾನ್​ನಲ್ಲೂ ಸ್ಫೋಟದ ಶಬ್ದ ಕೇಳಿದೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply