ಪ್ಯಾಲೆಸ್ತೇನಿಯರಿಗೆ ಮತ್ತೆ ಶಾಕ್ ಕೊಟ್ಟ ಇಸ್ರೇಲ್​!

masthmagaa.com:

ಪ್ಯಾಲೆಸ್ತೇನ್​​ನ ಗಾಜಾಪಟ್ಟಿಯ ಮೀನುಗಾರಿಕಾ ವಲಯವನ್ನು ಇಸ್ರೇಲ್​​​ ಅರ್ಧಕ್ಕರ್ಧ ಕಡಿಮೆ ಮಾಡಿದೆ. ಇಸ್ರೇಲ್​​ನಲ್ಲಿ ಹೊಸ ಸರ್ಕಾರ ಬಂದ್ಮೇಲೆ ಶಾಂತಿಯತ್ತ ಒಂದೊಂದೇ ಹೆಜ್ಜೆ ಇಡೋಕೆ ಶುರು ಮಾಡಿತ್ತು. ಜುಲೈ 12ರಂದು ಗಾಜಾ ಪಟ್ಟಿಯ ಮೀನುಗಾರಿಕಾ ವಲಯವನ್ನು ಮತ್ತಷ್ಟು ವಿಸ್ತರಿಸೋದಾಗಿ ಘೋಷಿಸಿತ್ತು. ಆದ್ರೆ ಗಾಜಾ ಪಟ್ಟಿಯಿಂದ ನಿರಂತರವಾಗಿ ಇಸ್ರೇಲ್ ಮೇಲೆ ಫೈರ್ ಬಲೂನ್ ದಾಳಿ ನಡೆಯುತ್ತಲೇ ಇದೆ. ಇದಕ್ಕೆ ಈಗ ಇಸ್ರೇಲ್ ಉತ್ತರ ನೀಡಿದೆ. ಗಾಜಾ ಪಟ್ಟಿಯಿಂದ 12 ನಾಟಿಕಲ್ ಮೈಲಿಯಷ್ಟು ದೂರದ ಸಾಗರದಲ್ಲಿ ಗಾಜಾ ಪಟ್ಟಿ ಮೀನುಗಾರಿಕೆ ಮಾಡ್ತಿತ್ತು. ಅದ್ರ ಮೀನುಗಾರಿಕಾ ವಲಯ ಅಷ್ಟು ದೂರ ಇತ್ತು. ಆದ್ರೆ ಈಗ ಅದ್ರಲ್ಲಿ 6 ನಾಟಿಕಲ್ ಮೈಲ್​​ನಷ್ಟು ಮೀನುಗಾರಿಕಾ ವಲಯವನ್ನು ಇಸ್ರೇಲ್ ವಶಕ್ಕೆ ಪಡೆದಿದೆ. ಇದ್ರಿಂದ ಗಾಜಾ ಪಟ್ಟಿಯ ಮೀನುಗಾರಿಕಾ ವಲಯ 6 ನಾಟಿಕಲ್ ಮೈಲಿಗೆ ಇಳಿಕೆಯಾಗಿದೆ.

-masthmagaa.com

Contact Us for Advertisement

Leave a Reply