ಕಬ್ಬಿಣದ ರಾಡು ಹಿಡಿದು ಬಂದ ಪ್ಯಾಲೆಸ್ತೀನ್ ಯುವಕನಿಗೆ ಇಸ್ರೇಲ್ ಗುಂಡೇಟು!

masthmagaa.com:

ಇಸ್ರೇಲ್ – ಪ್ಯಾಲೆಸ್ತೀನ್ ನಡುವೆ ಮತ್ತೆ ಸಂಘರ್ಷದ ವಾತಾವಣ ನಿರ್ಮಾಣವಾಗ್ತಿದೆ. ಇಸ್ರೇಲಿ ನಿಯಂತ್ರಣದ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ಒಬ್ಬ ಪ್ಯಾಲೆಸ್ತೀನಿ ಯುವಕನ ಹತ್ಯೆ ಮಾಡಿದ್ದಾರೆ ಅಂತ ಪ್ಯಾಲೆಸ್ತೀನ್ ಆರೋಗ್ಯಾಧಿಕಾರಿಗಳು ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರೋ ಇಸ್ರೇಲ್ ಅಧಿಕಾರಿಗಳು, ಆ ಯುವಕ ಕಬ್ಬಿಣದ ರಾಡು ಹಿಡಿದು ಇಸ್ರೇಲಿ ಪಡೆಗಳ ಕಡೆಗೆ ಹೊಡೆಯಲು ಬಂದಿದ್ದ ಅಂತ ಹೇಳಿದ್ದಾರೆ. ಅಂದಹಾಗೆ ಮೃತ ಯುವಕ, 41 ವರ್ಷದ ಶದಿ ಓಮರ್ ಬೇಯಿಟಾ ಪಟ್ಟಣದ ಸಮೀಪ ಗುಂಡೇಟಿಗೆ ಬಲಿಯಾಗಿದ್ದಾನೆ. ಇದೇ ಜಾಗದಲ್ಲಿ, ನಮ್ಮ ಭೂಮಿಯನ್ನ ಇಸ್ರೇಲ್ ಅಕ್ರಮ ಒತ್ತುವರಿ ಮಾಡುತ್ತಿದೆ ಅಂತ ಆರೋಪಿಸಿ ವಾರಗಳ ಕಾಲ ಪ್ರತಿಭಟನೆ ಆಗಿತ್ತು ಅನ್ನೋದು ಗಮನಾರ್ಹ.

-masthmagaa.com

Contact Us for Advertisement

Leave a Reply