ಬೆಂಗಳೂರು ಐಟಿ ರೈಡ್‌: ಮಂಚದಡಿ ರಾಶಿ ಹಣ ಪತ್ತೆ

masthmagaa.com:

ಬೆಂಗಳೂರಿನ ಆರ್‌.ಟಿ. ನಗರದ ಎರಡು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನ ವಶಪಡಿಸಿಕೊಂಡಿದ್ದಾರೆ. ಆತ್ಮಾನಂದ ಕಾಲೋನಿ ಫ್ಲ್ಯಾಟ್‌ ಒಂದರ ಮಂಚದಡಿಯಲ್ಲಿ, ಬಚ್ಚಿಟ್ಟ ನೋಟುಗಳ ರಾಶಿ ಪತ್ತೆಯಾಗಿವೆ. ಬರೋಬ್ಬರಿ 23 ಬಾಕ್ಸ್‌ಗಳಲ್ಲಿ 500 ಮುಖಬೆಲೆಯ ನೋಟುಗಳು ಸಿಕ್ಕಿವೆ. ನೆನ್ನೆ ಸಂಜೆ ಕಾರಿನಲ್ಲಿ ನೋಟುಗಳ ಸಾಗಾಟ ಮಾಡಲು ತಯಾರಿ ನಡೆಸಲಾಗಿತ್ತು ಎನ್ನಲಾಗಿದೆ. ಆತ್ಮಾನಂದ ಕಾಲೋನಿ ಫ್ಲ್ಯಾಟ್‌ನಲ್ಲಿ ದಾಳಿ ನಡೆಸಿದ ಬಳಿಕ ಗಣೇಶ ಬ್ಲಾಕ್‌ನಲ್ಲಿರುವ ಮಾಜಿ ಕಾರ್ಪೋರೇಟರ್‌ ಅಶ್ವತ್ಥಾಮ ನಿವಾಸದ ಮೇಲೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪತ್ತೆಯಾಗಿರುವ ಕಂತೆ ಕಂತೆ ಹಣ ಯಾರದ್ದು? ಹಣ ಸಿಕ್ಕ ಫ್ಲ್ಯಾಟ್‌ ಯಾರಿಗೆ ಸೇರಿದ್ದು? ಎಂಬುದರ ಕುರಿತು ಗುಟ್ಟು ಬಿಟ್ಟುಕೊಡದ ಐಟಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

-masthmagaa.com

Contact Us for Advertisement

Leave a Reply