ಪರಂ ಮನೆಯಲ್ಲಿ ಐಟಿ ಶೋಧ ಅಂತ್ಯ..! ಲೆಕ್ಕವಿಲ್ಲದ ಆಸ್ತಿ ಎಷ್ಟಿದೆ ಗೊತ್ತಾ..?

ಕಾಂಗ್ರೆಸ್ ನಾಯಕ, ಮಾಜಿ ಡಿಸಿಎಂ ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ಅಂತ್ಯವಾಗಿದೆ. ನಿನ್ನೆ ರಾತ್ರಿಯಿಡೀ ಶೋಧಕಾರ್ಯ ಮುಂದುವರಿಸಿದ್ದ ಅಧಿಕಾರಿಗಳು, ಬೆಳಗ್ಗಿನ ಜಾವ 3.30ಕ್ಕೆ ವಾಪಸ್ಸಾಗಿದ್ದಾರೆ. ಇನ್ನು ಪರಮೇಶ್ವರ್ ನಿವಾಸದಲ್ಲಿದ್ದ ಮಹತ್ವದ ದಾಖಲೆಗಳು ಮತ್ತು 80 ಲಕ್ಷ ನಗದನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಸುಮಾರು 100 ಕೋಟಿಗೂ ಹೆಚ್ಚು ಆಸ್ತಿಗೆ ಪರಮೇಶ್ವರ್ ಲೆಕ್ಕ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕಾಲೇಜಿನಿಂದ ಬಂದ ಹಣವನ್ನು ಪಂಚತಾರಾ ಹೋಟೆಲ್‍ಗಳ ಮೇಲೆ ಹೂಡಿಕೆ ಮಾಡಲಾಗಿದೆ. ಅಲ್ದೆ ಪರಮೇಶ್ವರ್‍ಗೆ ಸೇರಿದ ಒಟ್ಟು ನಾಲ್ಕೂವರೆ ಕೋಟಿ ರೂಪಾಯಿ ದುಡ್ಡು ಕೂಡ ಪತ್ತೆಯಾಗಿದೆ. ಇನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ರಾತ್ರಿ 11 ಗಂಟೆವರೆಗೆ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ನಿನ್ನೆ ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಹಾಗೂ ಸಹೋದರನ ಪುತ್ರ ಆನಂದ್ ಸಿದ್ದಾರ್ಥ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ 120ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ.

Contact Us for Advertisement

Leave a Reply