ಜಮ್ಮು ಕಾಶ್ಮೀರದಲ್ಲಿ ಈಗ ಮಾದಕ ವಸ್ತುಗಳ ಭಯೋತ್ಪಾದನೆ!

masthmagaa.com:

ಜಮ್ಮು ಕಾಶ್ಮೀರದಲ್ಲಿ ಇಷ್ಟು ದಿನ ಶಸ್ತ್ರಾಸ್ತ್ರಗಳ ಮೂಲಕ ನಡೆಯುತ್ತಿದ್ದ ಭಯೋತ್ಪಾದನೆ, ಈಗ ಮಾದಕ ವಸ್ತುಗಳತ್ತ ತಿರುಗಿದಂತಿದೆ. ಯಾಕಂದ್ರೆ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ 45 ಕೋಟಿ ಮೊತ್ತದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ 10 ಮಂದಿಯನ್ನು ಅರೆಸ್ಟ್ ಕೂಡ ಮಾಡಲಾಗಿದೆ. 11 ಪ್ಯಾಕೆಟ್​​ಗಳಲ್ಲಿ ಒಟ್ಟು 9 ಕೆಜಿಯಷ್ಟು ಮಾದಕ ವಸ್ತು ಇಟ್ಕೊಂಡಿದ್ದ ಕಿಡಿಗೇಡಿಗಳಿಂದ, ಚೀನೀ ಗ್ರನೇಡ್​, ಚೀನೀ ಪಿಸ್ತೂಲ್, ಗುಂಡುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಮತ್ತೊಂದ್ಕಡೆ ಉತ್ತರ ಪ್ರದೇಶದಲ್ಲೂ 3 ಕೋಟಿ ಬೆಲೆ ಬಾಳುವ ಮಾದಕ ವಸ್ತುಗಳೊಂದಿಗೆ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply