ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​​​ಗೆ ಇಡಿ ನೋಟಿಸ್!

masthmagaa.com:
200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​​ಗೆ ಇಡಿ ಅಥವಾ ಜಾರಿ ನಿರ್ದೇಶನಾಲಯ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ಡಿಸೆಂಬರ್ 8ನೇ ತಾರೀಖು ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸಮನ್ಸ್​ನಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಇದು ಫೋರ್ಟಿಸ್​ ಹೆಲ್ತ್​​ಕೇರ್ ಪ್ರೊಮೋಟರ್ ಶಿವಿಂದರ್​ ಸಿಂಗ್​​ ಕುಟುಂಬಕ್ಕೆ ಬರೋಬ್ಬರಿ 200 ಕೋಟಿ ವಂಚನೆ ಮಾಡಿದ ಪ್ರಕರಣ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಸುಖೇಶ್ ಚಂದ್ರಶೇಖರ್ ಮತ್ತು ಆತನ ಪತ್ನಿ ಕಮ್​ ನಟಿ ಲೀನಾ ಪೌಲ್​ ಈಗಾಗಲೇ ಅರೆಸ್ಟ್ ಆಗಿದ್ದಾರೆ. ವಂಚನೆಯ ಮಾಸ್ಟರ್ ಮೈಂಡ್​ ಸುಕೇಶ್​ ಚಂದ್ರಶೇಖರ್​ನಿಂದ ನಟಿ ​ ಜಾಕ್ವೆಲಿನ್​ ಫರ್ನಾಂಡಿಸ್ ಬೆಳೆಬಾಳುವ ಗಿಫ್ಟ್​ಗಳನ್ನ ಪಡೆದುಕೊಂಡಿದ್ದಾರೆ ಅನ್ನೋ ಆರೋಪವಿದೆ. ಹೀಗಾಗಿ ಈ ಪ್ರಕರಣದಲ್ಲಿ ಜಾಕ್ವೆಲಿನ್​​ ಫರ್ನಾಂಡಿಸ್​ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ಇಡಿ ಸಮನ್ಸ್ ನೀಡಿದೆ. ನಿನ್ನೆ ಮುಂಬೈ ಏರ್​ಪೋರ್ಟ್​ನಿಂದ ದುಬೈಗೆ ಹಾರೋಕೆ ಮುಂದಾಗಿದ್ದ ಜಾಕ್ವೆಲಿನ್​​ನನ್ನ ತಡೆದು ಮನೆಗೆ ಕಳಿಸಲಾಗಿತ್ತು. ಅವರ ವಿರುದ್ಧ ಇಡಿ ಅಧಿಕಾರಿಗಳು ಈ ಹಿಂದೆನೇ ಲುಕೌಟ್​ ಸರ್ಕ್ಯೂಲರ್ – LOC ಜಾರಿ ಮಾಡಿದ್ದರು.
-masthmagaa.com

Contact Us for Advertisement

Leave a Reply