ಅರವಿಂದ್‌ ಕೇಜ್ರಿವಾಲ್‌ ಅಸಿಸ್ಟೆಂಟ್‌ ಕರ್ತವ್ಯದಿಂದ ವಜಾ!

masthmagaa.com:

ದಿಲ್ಲಿ ಅಬಕಾರಿ ಹಗರಣದ ಆರೋಪಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವ್ರ ಪರ್ಸನಲ್‌ ಅಸಿಸ್ಟೆಂಟ್‌ ಬಿಭಾವ್‌ ಕುಮಾರ್‌ಗೂ ಈಗ ಸಂಕಷ್ಟ ಎದುರಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ರು ಅನ್ನೋ ಹಳೇ ಪ್ರಕರಣದ ಒಂದ್ರ ಮೇಲೆ ಅವ್ರನ್ನ ಕರ್ತವ್ಯದಿಂದ ವಜಾಗೊಳಿಸಿ, ವಿಜಲೆನ್ಸ್ ಇಲಾಖೆ ಆದೇಶ ಪ್ರಕಟಿಸಿದೆ. ಬಿಭಾವ್‌ ಕುಮಾರ್‌ ವಿರುದ್ಧ ಈ ಹಿಂದೆ 2007ರಲ್ಲಿ FIR ದಾಖಲಾಗಿತ್ತು. ಇದ್ರ ಪ್ರಕಾರ ಬಿಭಾವ್‌ ಕುಮಾರ್‌ ಮೂರು ಜನರೊಂದಿಗೆ ಸೇರ್ಕೊಂಡು ಸರ್ಕಾರಿ ಅಧಿಕಾರಿಯೊಬ್ರ ಕೆಲಸಕ್ಕೆ ಅಡ್ಡಿಪಡಿಸಿದ್ರು. ಅವ್ರನ್ನ ನಿಂದಿಸಿ..ಬೆದರಿಸಿದ್ರು ಅಂತ ದೂರು ದಾಖಲಾಗಿತ್ತು. ನಂತ್ರ ಇವ್ರನ್ನ ಅರೆಸ್ಟ್‌ ಮಾಡದೇ…ಚೀಫ್‌ ಜುಡಿಶಿಯಲ್‌ ಮೆಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಚಾರ್ಜ್‌ಶೀಟ್‌ ಸಬ್‌ಮಿಟ್‌ ಮಾಡಿದ್ದು, ಕೇಸ್‌ ಪೆಂಡಿಂಗ್‌ನಲ್ಲಿದೆ. ಸೋ ಈ ಆರೋಪದ ಮೇರೆಗೆ ವಿಜಲೆನ್ಸ್ ಇಲಾಖೆ ಕೇಜ್ರಿವಾಲ್‌ ಅವ್ರ ಪರ್ಸನಲ್‌ ಅಸಿಸ್ಟಂಟ್‌ನ್ನೇ ಕೆಲಸದಿಂದ ವಜಾಗೊಳಿಸಿದೆ.

ಇನ್ನು ಮದ್ಯ ಹಗರಣ ಸಂಬಂಧ ಇಡಿ ಬಲೆಗೆ ಸಿಕ್ಕಿ…ಕಸ್ಟಡಿಯಲ್ಲಿದ್ದ BRS ನಾಯಕಿ ಕೆ ಕವಿತಾ ಅವ್ರನ್ನ ಈಗ CBI ವಶಕ್ಕೆ ಪಡೆದಿದೆ. ಮದ್ಯ ಹಗರಣ ಸಂಬಂಧ CBI ಕವಿತಾರನ್ನ ಅರೆಸ್ಟ್‌ ಮಾಡಿದೆ. ಕವಿತಾ ಅವ್ರನ್ನ ಅರೆಸ್ಟ್‌ ಮಾಡಲು ಅನುಮತಿ ಕೋರಿ CBI ಏಪ್ರಿಲ್‌ 10ರಂದು ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸೋ ಕೋರ್ಟ್‌ ಕೂಡ ಕವಿತಾ ಅವ್ರ ಬಂಧನಕ್ಕೆ ಅಸ್ತು ಅಂದಿತ್ತು. ಪರಿಣಾಮ ಈಗ ಕವಿತಾ CBI ವಶದಲ್ಲಿದ್ದಾರೆ. ಅಂದ್ಹಾಗೆ ED ಕವಿತಾರನ್ನ ಮಾರ್ಚ್‌ 15 ಅರೆಸ್ಟ್‌ ಮಾಡಿತ್ತು.

-masthmagaa.com

Contact Us for Advertisement

Leave a Reply