ಜೈಲಿನಲ್ಲೂ ನಾವಲ್ನಿಗೆ ಜೀವ ಭಯ! ನಿದ್ದೆ ಮಾಡಲು ಬಿಡದೆ ಚಿತ್ರಹಿಂಸೆ!

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನಾವಲ್ನಿಗೆ ಜೈಲಿನಲ್ಲೂ ಭಾರಿ ಹಿಂಸೆ ನೀಡಲಾಗ್ತಿದೆ. ಅವರ ಆರೋಗ್ಯ ಕೂಡ ದಿನೇ ದಿನೇ ಹದಗೆಡ್ತಾ ಇದ್ಯಂತೆ.. ಹೀಗಂತ ಅವರೇ ಪತ್ರದ ಮೂಲಕ ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ನನಗೆ ನಿದ್ರೆ ಮಾಡಲು ಬಿಡದೇ ಅಧಿಕಾರಿಗಳು ಚಿತ್ರಹಿಂಸೆ ನೀಡ್ತಿದ್ದಾರೆ. ನನ್ನ ಆರೋಗ್ಯ ಹದಗೆಡ್ತಿದ್ದು, ಜೀವ ಭಯ ಎದುರಾಗಿದೆ.. ಈಗ ನನ್ನ ಮೇಲೆ ವೈಯಕ್ತಿಕವಾಗಿ ಸೇಡು ತೀರಿಸಿಕೊಳ್ಳಲು ಈ ಶಿಕ್ಷೆ ನೀಡಲಾಗ್ತಿದೆ.

ಇದನ್ನು ಈ ಕೂಡಲೇ ನಿಲ್ಲಿಸಬೇಕು ಅಂತ ಮನವಿ ಮಾಡಿದ್ದಾರೆ. ಜೊತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಸೂಚನೆ ಮೇರೆಗೆ ತನಗೆ ಈ ರೀತಿ ಹಿಂಸೆ ನೀಡಲಾಗ್ತಿದೆ ಅಂತ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಈ ಹಿಂದೆ ತನಗೆ ತುಂಬಾ ಬೆನ್ನು ನೋವು ಮತ್ತು ಕಾಲು ನೋವು ಇರೋದಾಗಿ ನಾವಲ್ನಿ ಹೇಳಿಕೊಂಡಿದ್ರು. ಅಂದಹಾಗೆ ವಿಷಪ್ರಾಶನದ ಬಳಿಕ ರಷ್ಯಾಗೆ ಬಂದ ನಾವಲ್ನಿಯನ್ನು ಹಳೇ ಕೇಸ್​ ಒಂದ್ರಲ್ಲಿ ಅರೆಸ್ಟ್ ಮಾಡಲಾಗಿತ್ತು. ನಂತರದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ, ಪೊಕ್ರೋವ್ ಜೈಲಿನಲ್ಲಿ ಇಡಲಾಗಿದೆ.

-masthmagaa.com

Contact Us for Advertisement

Leave a Reply