ಭಾರತ-ಮಾಲ್ಡೀವ್ಸ್‌ ವಿವಾದ! ಕೊನೆಗೂ ಮೌನ ಮುರಿದ ಎಸ್‌ ಜೈಶಂಕರ್‌!

masthmagaa.com:

ಭಾರತ-ಮಾಲ್ಡೀವ್ಸ್‌ ವಿವಾದ ಕುರಿತು ಇದೀಗ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮೌನ ಮುರಿದಿದ್ದಾರೆ. ʻಪ್ರತೀ ಸಲ ಎಲ್ಲಾ ದೇಶವೂ ಭಾರತಕ್ಕೆ ಸಪೋರ್ಟ್‌ ಮಾಡುತ್ತವೆ. ಭಾರತವನ್ನ ಒಪ್ಪಿಕೊಳ್ಳುತ್ವೆ ಅಂತ ಗ್ಯಾರಂಟಿ ಕೊಡೋಕಾಗಲ್ಲʼ ಅಂತ ಹೇಳಿದ್ದಾರೆ. ಅಲ್ಲದೆ, ʻಪಾಲಿಟಿಕ್ಸ್‌ ಈಸ್‌ ಪಾಲಿಟಿಕ್ಸ್‌ ಅಷ್ಟೇ. ಪ್ರತೀ ದಿನ, ಪ್ರತೀ ದೇಶ, ಪ್ರತಿಯೊಬ್ರು ನಮಗೆ ಬೆಂಬಲ ನೀಡ್ತಾರೆ, ನಮ್ಮನ್ನ ಒಪ್ಪಿಕೊಳ್ತಾರೆ ಅಂತ ಗ್ಯಾರಂಟಿ ನೀಡೋಕಾಗಲ್ಲ. ಭಾರತ ಕಳೆದ 10 ವರ್ಷಗಳಿಂದ ಜಾಗತಿಕವಾಗಿ ಎಲ್ಲಾ ದೇಶಗಳ ಜೊತೆ ಸ್ಟ್ರಾಂಗ್‌ ಕನೆಕ್ಷನ್‌ ಬೆಳೆಸೋಕೆ ಶ್ರಮಿಸ್ತಿದೆ. ಆದ್ರೆ ರಾಜಕೀಯ ಕಾರಣಕ್ಕೆ ಈ ಸಂಬಂಧ ಒಮ್ಮೊಮ್ಮೆ ಮೇಲೆ ಕೆಳಗೆ ಆಗ್ಬೋದು. ಆದ್ರೆ ಆ ದೇಶದ ಜನರಿಗೆ ಅಂದ್ರೆ ಮಾಲ್ಡೀವ್ಸ್‌ನ ಜನರಿಗೆ ನಮ್ಮ ಮೇಲೆ ಒಳ್ಳೆ ಭಾವನೆ ಇದೆ. ಜೊತೆಗೆ ಉಭಯ ದೇಶಗಳು ಒಳ್ಳೆ ಸಂಬಂಧ ಹೊಂದಿರೋದು ಎಷ್ಟು ಮುಖ್ಯ ಅಂತ ಅವ್ರುಕೂಡ ಚೆನ್ನಾಗಿ ತಿಳ್ಕೊಂಡಿದ್ದಾರೆ. ಕೆಲವೊಮ್ಮೆ ನಾವು ಅನ್ಕೊಂಡ್ಹಾಗೆ ಪರಿಸ್ಥಿತಿ ಇರಲ್ಲ. ಆಗ ನಾವು ಜನರ ಮನವೊಲಿಸಿ, ಪರಿಸ್ಥಿತಿಯನ್ನ ಹಿಂದಿನಂತೆ ಸರಿ ಮಾಡ್ಬೇಕುʼ ಅಂತ ಹೇಳಿದ್ದಾರೆ. ಈ ಮೂಲಕ ಮಾಲ್ಡೀವ್ಸ್‌ ವಿಚಾರದಲ್ಲಿ ಭಾರತದ ನಿಲುವನ್ನ ಜೈಶಂಕರ್‌ ಅವರೇ ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ. ಮಾಲ್ಡೀವ್ಸ್‌ ನಮಗೆ ಬೇಕು, ಅವರ ಜೊತೆಗೆ ನಮಗೆ ಚೆನ್ನಾಗಿರೋ ಸಂಬಂಧ ಇದೆ. ಆದ್ರೆ ಇದು ತಾತ್ಕಲಿಕ ಸಂಘರ್ಷ ಅನ್ನೋ ಅರ್ಥದಲ್ಲಿ ಜೈಶಂಕರ್‌ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply