ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ: ಜಮಾತ್ ಇ ಇಸ್ಲಾಮಿ ನಾಯಕ

masthmaghaa.com:

ಜಮಾತ್ ಇ ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಕ್​ ಪಾಕ್ ಪ್ರಧಾನಿ ಇಮ್ರಾನ್ ಖಾನ್​ರನ್ನು ಇಂಟರ್​​ನ್ಯಾಷನಲ್ ಬೆಗ್ಗರ್ ಅಂದ್ರೆ ಅಂತಾರಾಷ್ಟ್ರೀಯ ಭಿಕ್ಷುಕ ಅಂತ ಕರೆದಿದ್ದಾರೆ. ಆರ್ಥಿಕ ಮುಗ್ಗಿಟ್ಟಿನಿಂದ ಕೆಟ್ಟು ಕೆರ ಹಿಡಿದು ಹೋಗಿರೋ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕಾದ್ರೆ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಕೆಳಗಿಳಿಯಬೇಕು.. ಅದೊಂದೇ ಸೊಲುಷನ್ ಅಂತ ಹೇಳಿದ್ದಾರೆ. ಲಾಹೋರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ದೇಶದಲ್ಲಿ ಹೊಸದಾಗಿ ಎಲೆಕ್ಷನ್ ನಡೀಬೇಕು ಅಂತ ಕರೆ ನೀಡಿದ್ರು. ಇಮ್ರಾನ್ ಖಾನ್ ನೇತೃತ್ವದ ಪಿಟಿಐಗೆ ದೇಶದಲ್ಲಿ ಆಡಳಿತ ನಡೆಸಲು ಆಗ್ತಿಲ್ಲ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆಗೆ ಅಪಮಾನಕರ ಒಪ್ಪಂದ ಮಾಡ್ಕೊಂಡಿದ್ದಾರೆ. ಈ ಇಮ್ರಾನ್ ಖಾನ್ ಅಂತರಾಷ್ಟ್ರೀಯ ಬೆಗ್ಗರ್ ರೀತಿ ಆಗೋಗಿದ್ದಾರೆ ಅಂತ ಕಿಡಿಕಾರಿದ್ರು.

-masthmagaa.com

Contact Us for Advertisement

Leave a Reply